27.7 C
Sullia
Sunday, March 8, 2026

ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಹುಂಡಿ ಎಣಿಕೆ; ಈ ವರ್ಷ ಸಂಗ್ರಹವಾದ ಹಣವೆಷ್ಟು?

ನ್ಯೂಸ್ ನಾಟೌಟ್ : ಅ. 17 ರಂದು ಜರುಗಿದ ಶ್ರೀ ಕಾವೇರಿ ತುಲಾ ಸಂಕ್ರಮಣ ಪತ್ರ ತೀರ್ಥೊದ್ಭವ ಜಾತ್ರೆಯ ನಂತರ ಪ್ರಥಮ ಹುಂಡಿ ಎಣಿಕೆಯನ್ನು ಭಾಗಮಂಡಲ ಕೆನರಾ ಬ್ಯಾಂಕ್ ಸಿಬಂದಿ, ಭಾಗಮಂಡಲ ಆರಕ್ಷಕ ಠಾಣಾ ಸಿಬಂದಿ, ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳು, ಭಾಗಮಂಡಲ ಕಂದಾಯ ಇಲಾಖೆ ಸಿಬಂದಿ ಸಮಕ್ಷಮ ವಿಡಿಯೋ ಚಿತ್ರೀಕರಣದೊಂದಿಗೆ ಹುಂಡಿಯನ್ನು ಎಣಿಸಲಾಯಿತು. ಈ ವರ್ಷ 18.05 ಲಕ್ಷ ರೂ. ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.ಹುಂಡಿ ಎಣಿಕೆ ಭಗಂಡೇಶ್ವರ ದೇವಾಲಯದಲ್ಲಿ ನಡೆಯಿತು.


ಶ್ರೀ ತಲಕಾವೇರಿ ದೇವಾಲಯದಲ್ಲಿ ರೂ. 7,27,389, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರೂ. 5,44,333, ಅನ್ನ ಸಂತರ್ಪಣಾ ನಿಧಿಯಲ್ಲಿ ರೂ. 2,52,867 ಹಾಗೂ ಇ-ಹುಂಡಿಯಲ್ಲಿ ರೂ. 2,80,411 ಸಂಗ್ರಹವಾಗಿದೆ. ಕಳೆದ ವರ್ಷ 12,06,855 ರೂ. ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೂ.5,98,145 ಹೆಚ್ಚಿಗೆ ಸಂಗ್ರಹವಾಗಿದೆ ಎಂದು ದೇವಾಲಯ ಇಒ ಮಾಹಿತಿ ನೀಡಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles