37.4 C
Sullia
Sunday, March 8, 2026

ಮಗಳ ಮದುವೆಯಲ್ಲಿ ತಂದೆಯ ಜೇಬಿ​ಗೆ ಕ್ಯೂಆರ್​ ಕೋಡ್ ಟ್ಯಾಗ್​!!ಮುಯ್ಯಿ ಮಾಡಬೇಕು ಎಂದರೆ ಫೋನ್​ನಿಂದ ಸ್ಕ್ಯಾನ್ ಮಾಡಿ ಹಣ ಪಾವತಿ!!

ನ್ಯೂಸ್ ನಾಟೌಟ್ : ಭಾರತದಲ್ಲಿ ಮದುವೆ ಎಂದರೆ ಅದರದ್ದೇ ಆದ ವಿಶೇಷ ಸಂಪ್ರದಾಯಗಳನ್ನು ಒಳಗೊಂಡಿದೆ. ವಿವಾಹ ಎಂದ ಮೇಲೆ ಅಲ್ಲಿ ಸಂಭ್ರಮ ಇರುತ್ತೆ.ಸಾವಿರಾರು ಜನರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿ ಆಶೀರ್ವಾದ ಮಾಡುತ್ತಾರೆ. ಜೊತೆಗೆ ಉಡುಗೊರೆಗಳನ್ನು ನೀಡುತ್ತಾರೆ. ಉಡುಗೊರೆ ನೀಡಿಲ್ಲ ಎಂದರೆ ಮದುವೆಯಲ್ಲಿ ಹಣವನ್ನು (ಮುಯ್ಯಿ) ನೀಡುವುದು ಕೂಡ ಇದೆ. ಈಗೀಗ ಎಲ್ಲಿ ನೋಡಿದರೂ ಹೆಚ್ಚು ಜನ ಫೋನ್​ ಪೇ, ಪೇಟಿಎಮ್, ಗೂಗಲ್​ ಪೇನಿಂದ ಹಣ ಪಾವತಿ ಮಾಡುತ್ತಿದ್ದಾರೆ. 


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೀಗಾಗಿ ಕೇರಳದ ವ್ಯಕ್ತಿ ಒಬ್ಬರು ತನ್ನ ಮಗಳ ಮದುವೆಗೆ ಬಂದವರಿಗೆ ಅನುಕೂಲವಾಗಲಿ ಎಂದು ಪೇಟಿಎಮ್​ ಕ್ಯೂಆರ್​ ಕೋಡ್ ಅನ್ನು ತಮ್ಮ ಜೇಬ್​ಗೆ ಟ್ಯಾಗ್ ಮಾಡಿಕೊಂಡಿದ್ದಾರೆ. ಇದರಿಂದ  ಮದುವೆಗೆ ಬಂದವರು ಮುಯ್ಯಿ ಮಾಡಬೇಕು ಎಂದರೆ ಫೋನ್​ನಿಂದ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿದರೆ ಸಾಕು. ಸದ್ಯ ಮದುವೆಯಲ್ಲಿ ಇದೊಂದು ವಿಡಿಯೋ ಹೊಸ ಟ್ರೆಂಡ್​ನಂತೆ ಎಲ್ಲೆಡೆ ವೈರಲ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. 

ಇನ್ನು ಮದುವೆಗೆ ಬಂದ ಜನರಂತೂ ಒಬ್ಬರು ಆದ ಮೇಲೆ ಒಬ್ಬರಂತೆ ಅವರ ಕ್ಯೂಆರ್ ಕೋಡ್​ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದಾರೆ. ಒಬ್ಬರು 1000 ರೂ ಪಾವತಿ ಮಾಡಿ, ಕ್ಯಾಮೆರಾಗೆ ತೋರಿಸಿದ್ದಾರೆ. ಮಗಳ ಮದುವೆಯಲ್ಲಿ ತಂದೆ ಈ ರೀತಿ ಕ್ಯೂಆರ್ ಕೋಡ್ ಟ್ಯಾಗ್ ಮಾಡಿಕೊಂಡಿದ್ದಕ್ಕೆ ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles