27.7 C
Sullia
Sunday, March 8, 2026

ನನ್ನನ್ನು ಗರ್ಭಿಣಿ ಮಾಡು’ ಎಂಬ ಆನ್‌ಲೈನ್‌ ಜಾಹಿರಾತು: ಲಿಂಕ್ ಒತ್ತಿ 11 ಲಕ್ಷ ಕಳೆದುಕೊಂಡ ವ್ಯಕ್ತಿ

ನ್ಯೂಸ್ ನಾಟೌಟ್ : ವಿಚಿತ್ರ ಜಾಹಿರಾತಿಗೆ ಮರುಳಾಗಿ ವ್ಯಕ್ತಿಯೋರ್ವ ಹಣ ಕಳೆದುಕೊಂಡ ಘಟನೆ ಬಗ್ಗೆ ವರದಿಯಾಗಿದೆ. ಆನ್ ಲೈನ್ ನಲ್ಲಿ ನನ್ನನ್ನು ಗರ್ಭಿಣಿಯನ್ನಾಗಿ ಮಾಡುವ ವ್ಯಕ್ತಿಗಾಗಿ ಹುಡುಕುತ್ತಿದ್ದೇನೆ’ ಎಂಬ ಜಾಹೀರಾತಿಗೆ ಪ್ರತಿಕ್ರಿಯಿಸಿ ವ್ಯಕ್ತಿಯೊಬ್ಬ 11 ಲಕ್ಷ ಕಳೆದುಕೊಂಡಿರುವ ಘಟನೆ ಪುಣೆಯಲ್ಲಿ (Pune) ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿದಾಗ, ಆರಂಭಿಕ ಶುಲ್ಕಗಳು, ಸದಸ್ಯತ್ವ ಶುಲ್ಕಗಳು, ಗೌಪ್ಯತೆ ಶುಲ್ಕಗಳನ್ನು ಪಾವತಿಸಬೇಕು ಎಂದು ಆ ವ್ಯಕ್ತಿಗೆ ಸೂಚನೆ ನೀಡಲಾಯಿತು. ಪಾವತಿಗಳನ್ನು ಮಾಡದ ಹೊರತು ಕೆಲಸ ಅಪೂರ್ಣವಾಗಿ ಉಳಿಯುತ್ತದೆ ಎಂದು ಆತನಿಗೆ ತಿಳಿಸಲಾಗಿತ್ತು. ಆತ ಆನ್‌ಲೈನ್‌ ಮೋಸದ ಜಾಲಕ್ಕೆ ಬಿದ್ದಿದ್ದಾನೆ.

ಹಲವು ಆನ್‌ಲೈನ್ ಹಣ ವರ್ಗಾವಣೆಗಳ ನಂತರ, ಆ ವ್ಯಕ್ತಿಗೆ ಜಾಹೀರಾತುದಾರರಿಂದ ಯಾವುದೇ ಸಂಪರ್ಕ ಸಿಕ್ಕಿಲ್ಲ. ಆಗ ತಾನು ಮೋಸ ಹೋಗಿರುವುದು ಆತನಿಗೆ ಅರಿವಾಗಿದೆ.ಇದೀಗ ಜಾಹಿರಾತಿನ ಹಿಂದಿನ ವಂಚಿಸಿರುವ ವ್ಯಕ್ತಿಗಾಗಿ ಹುಡುಕಾಟ ಆರಂಭವಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles