ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಹಾಕಿದ್ದ ಆಕ್ಷೇಪಾರ್ಹ ಕಮೆಂಟ್ ಅನ್ನು ಶೇರ್ ಮಾಡಿದ ಕಾರಣಕ್ಕೆ ವಿಎಚ್‌ಪಿ ಮುಖಂಡ ಶರಣ್ ಶರಣ್ ಪಂಪ್‌ವೆಲ್‌ಅನ್ನು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆಸಲಾಗಿದೆ.
ಕದ್ರಿ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಲಾಗಿದ್ದು, ಶರಣ್ ಪಂಪ್ ವೆಲ್ ಶೇರ್ ಮಾಡಿದ್ದ ಕಮೆಂಟ್ ಈಗಾಗಲೇ ಡಿಲೀಟ್ ಆಗಿದೆ. ವಿಕಾಸ್ ಎಂಬಾತ ಹಾಕಿದ್ದ ಕಮೆಂಟ್ ಅನ್ನು ಶರಣ್ ಪಂಪ್ ವೆಲ್ ಶೇರ್ ಮಾಡಿದ್ದರು. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಕಮೀಷನರ್ ತಿಳಿಸಿದ್ದಾರೆ.













