21.6 C
Sullia
Sunday, March 8, 2026

ಡಿಂಪಲ್ ಕ್ವೀನ್ ರಚಿತಾ ರಾಮ್ ಆಟೋ ಚಾಲಕರ ಸಂಘಕ್ಕೆ ರಾಯಭಾರಿ, ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಸಂಭ್ರಮಿಸಿದ ನಟಿ

ನ್ಯೂಸ್ ನಾಟೌಟ್ : ಡಿಂಪಲ್ ಕ್ವೀನ್ ಎಂದೇ ಪ್ರಸಿದ್ಧ ರಾದ ರಚಿತಾ ರಾಮ್ (Rachita Ram) ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಈ ಖುಷಿಗೆ ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಸಂಭ್ರಮಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬೆಂಗಳೂರಿನಿಂದ ನೂರಾರು ಆಟೋ ಚಾಲಕರು ಆರ್.ಆರ್ ನಗರದ ಅವರ ನಿವಾಸದ ಬಳಿ ಜಮಾಯಿಸಿ ರಚಿತಾರನ್ನ ಅಫಿಷಿಯಲ್ ಆಗಿ ಚಾಲಕರ ಸಂಘದ (Auto Drivers Association) ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಆಟೋ ಎದುರು ಆಟೋ ಚಾಲಕರ ವಸ್ತ್ರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್. ಈ ವಿಚಾರವನ್ನ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ರಚಿತಾ. 

Related Articles

LEAVE A REPLY

Please enter your comment!
Please enter your name here

Latest Articles