ನ್ಯೂಸ್ ನಾಟೌಟ್ :ಹಾವು ಕಡಿತದಿಂದ ಮಹಿಳೆಯೊಬ್ಬರು
ಅಸ್ವಸ್ಥರಾಗಿರುವ ಘಟನೆ ಸುಳ್ಯ ತಾಲೂಕಿನ
ಆಲೆಟ್ಟಿ ಗ್ರಾಮದ ಕೊಳ್ಚಾರಿನಲ್ಲಿ ಅ.26ರ ರವಿವಾರ ಸಂಭವಿಸಿದೆ.
ಕೋಲ್ಚಾರ್ ನ ವಿನುತ ಅವರು ಬೆಳಗ್ಗೆ ಮನೆಯ ಹೊರ ಭಾಗದಲ್ಲಿ
ಇರಿಸಿದ್ದ ಚಪ್ಪಲಿಯನ್ನು ಧರಿಸಲು ಹೋದಾಗ ಚಪ್ಪಲಿಯ ಒಳಗೆ
ಸೇರಿಕೊಂಡಿದ್ದ ಹಾವು ಕಾಲಿಗೆ ಕಚ್ಚಿದೆ.
ಕೂಡಲೇ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು
ಚಿಕಿತ್ಸೆ ಮುಂದುವರಿದಿದೆ.













