21.6 C
Sullia
Sunday, March 8, 2026

ಸುಳ್ಯ: ಪ್ಲೇಟ್ಲೆಟ್ ಕೊರತೆಯಿಂದ ಸಂಕಷ್ಟದಲ್ಲಿ ಚಾಲಕ, ಸವಾಲಾದ ಚಿಕಿತ್ಸೆ ವೆಚ್ಚ, ವಿಡಿಯೋ ವೀಕ್ಷಿಸಿ

ನ್ಯೂಸ್ ನಾಟೌಟ್: ಸುಳ್ಯದ ಲಾರಿ ಚಾಲಕರೊಬ್ಬರು ತೀವ್ರ ಪ್ಲೇಟ್ಲೆಟ್ ಕೊರತೆಯಿಂದ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

m

9

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ರಾಮಕುಮೇರಿ ನಿವಾಸಿ ಹರಿಪ್ರಸಾದ್ ಅವರು ಕಳೆದ ನಾಲ್ಕು ತಿಂಗಳಿನಿಂದ ಅಪ್ಲಾಸ್ಟಿಕ್ ಅನಿಮಿಯಾ (ಪ್ಲೇಟ್ಲೆಟ್ ಕೊರತೆ) ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರ್ಥಿಕ ವೆಚ್ಚ ಭರಿಸಲಾಗದೆ ಕುಟುಂಬ ವರ್ಗ ಆಘಾತಕ್ಕೆ ಒಳಗಾಗಿದೆ. ವೃದ್ದ ತಂದೆ, ತಾಯಿ, ಪತ್ನಿ ಹಾಗೂ ಇನ್ನೂ ಬದುಕು ಅರಿಯದ ಇಬ್ಬರು ಪುಟ್ಟ ಮಕ್ಕಳು ಏನೂ ಮಾಡಲಾಗದೆ ಅಸಹಾಯಕರಾಗಿ ಕಣ್ಣೀರಿಡುತ್ತಿದ್ದಾರೆ. ನವರಾತ್ರಿಯ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಈ ಕುಟುಂಬ ಕಣ್ಣೀರಿನ ಕಡಲಲ್ಲಿ ಮುಳುಗಿದೆ. ಹೀಗಾಗಿ ಇವರಿಗೊಂದು ಸಣ್ಣ ಆರ್ಥಿಕ ಸಹಾಯ ನೀಡುವ ಮೂಲಕ ಕುಟುಂಬಕ್ಕೆ ನೆರವಾಗೋಣ. ನೀವು ಕೊಡುವ ಒಂದೊಂದು ರೂಪಾಯಿ ಕುಟುಂಬವನ್ನು ಉಳಿಸಲಿದೆ. ಸಹೃದಯಿ ಬಂದುಗಳು ಮೇಲೆ ನೀಡಲಿರುವ ಖಾತೆ ಹಾಗೂ ಗೂಗಲ್ ಪೇ ಸ್ಕ್ಯಾನರ್ ಗೆ ಹಣವನ್ನು ಕಳುಹಿಸಬಹುದಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles