21.6 C
Sullia
Sunday, March 8, 2026

ಕುಕ್ಕೆ ಸುಬ್ರಹ್ಮಣ್ಯ: ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಇಸ್ರೋ ಸಿಬ್ಬಂದಿ ಭೇಟಿ, ಕುಟುಂಬ ಸಹಿತ ಬಂದು ಪೂಜೆ ಸಲ್ಲಿಕೆ

ನ್ಯೂಸ್ ನಾಟೌಟ್: ತಿರುವನಂತಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಸ್ರೋ ಸಿಬ್ಬಂದಿ ರಾಜಲಕ್ಷ್ಮೀ ಹಾಗೂ ಅವರ ಕುಟುಂಬ ಅಕ್ಟೋಬರ್ 23ರಂದು ಕುಕ್ಕೆ ಸುಬ್ರಹ್ಮಣ್ಯ ಸಮೀಪದಲ್ಲಿರುವ ಕುಲ್ಕುಂದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ದೀಕ್ಷಿತ್ ಅವರು ದೇವಳ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿದರು. ಸದ್ಯ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಅತಿರುದ್ರ ಪುರಶ್ಚರಣೆ ಹಾಗೂ ಶ್ರೀ ರುದ್ರ ಮಹಾಯಾಗ ಆರಂಭಗೊಂಡಿದೆ. ಅ.22ರಂದು ಆರಂಭಗೊಂಡಿರುವ ಈ ಯಾಗವು ನವೆಂಬರ್ 17ರಂದು ಸಂಪನ್ನಗೊಳ್ಳಲಿದೆ. ಲೋಕಕಲ್ಯಾಣಾರ್ಥವಾಗಿ ಈ ಯಾಗವನ್ನು ಹಮ್ಮಿಕೊಳ್ಳಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅ.23ರಂದು ಸ್ಥಳೀಯ ವೈದಿಕರಿಂದ ರುದ್ರಾನುಷ್ಠಾನ ಸಮರ್ಪಣೆ ನಡೆಯಿತು. ಅದೇ ದಿನ ರಾತ್ರಿ ಶ್ರೀ ಅಯ್ಯಪ್ಪ ಭಜನಾ ತಂಡ ಕೊಲ್ಲಮೊಗ್ರ ಇವರಿಂದ ಭಜನಾ ಸೇವೆ ನಡೆಯಿತು. ಅ.24ರಂದು ಸ್ಥಳೀಯ ವೈದಿಕರಿಂದ ರುದ್ರಾನುಷ್ಠಾನ ಸಮರ್ಪಣೆ ನಡೆಯಿತು.ಸಂಜೆ ನಾಗಶ್ರೀ ಭಜನಾ ತಂಡದಿಂದ ಭಜನಾ ಸೇವೆ ನಡೆಯಿತು. ನೆಲಮಂಗಲದ ಪವಾಡ ಬಸವೇಶ್ವರ ಮಠದ ಶ್ರೀಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಅ.25ರಂದು ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ (ರಿ) ಇಲ್ಲಿನ ವೈದಿಕರಿಂದ ರುದ್ರಾನುಷ್ಠಾನ ಸಮರ್ಪಣೆ ನಡೆಯಿತು. ಪಂಜ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥದಿಂದ ಭಜನಾ ಸೇವೆ ನಡೆಯಿತು.

Related Articles

LEAVE A REPLY

Please enter your comment!
Please enter your name here

Latest Articles