ನ್ಯೂಸ್ ನಾಟೌಟ್ : ಸ್ಯಾಂಡಲ್‌ವುಡ್ ಚಿತ್ರ ಪ್ರೇಮಿಗಳ ಮನಗೆದ್ದ ಈ ಚೆಲುವೆ ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದ್ದ ನಟಿ. ರವಿಚಂದ್ರನ್ ಮತ್ತು ಇವರ ಜೋಡಿಗೆ ಸಿನಿ ರಸಿಕರು ಭಲೆ ಜೋಡಿ ಎಂದು ಮೆಚ್ಚಿದ್ದರು. ಲಿಂಬೆ ಹಣ್ಣಿನಂಥ ಹುಡುಗಿ ಬಂದ್ಲು ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಛಾಪು ಮೂಡಿಸಿದವರು.ಹೌದು, ಸ್ಯಾಂಡಲ್‌ವುಡ್ ನಲ್ಲಿ ನಟಿಸಿ ಖ್ಯಾತಿ ಪಡೆದ ಈ ಚೆಲುವೆ ಇಂದು ಬರೋಬ್ಬರಿ 4600 ಕೋಟಿಯ ಒಡತಿ.ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾಗಿರುವ 57 ವರ್ಷದ ಈ ನಟಿ ಯಾರು?
90 ರ ದಶಕದಲ್ಲಿ ಎಲ್ಲಿ ನೋಡಿದರೂ ಇವರದ್ದೇ ಸುದ್ದಿ, ಮಾದಕ ಕಣ್ಣುಗಳಿಂದಲೇ ಎಲ್ಲರ ಪಡ್ಡೆ ಹುಡುಗರ ನಿದ್ದೆ ಕೆಡಿಸಿದವರು. ಸುಂದರ ನಟಿ ಜೂಹಿ ಚಾವ್ಲಾ ತಮ್ಮ ನಟನೆ ಮತ್ತು ನೋಟದಿಂದ ಅಭಿಮಾನಿಗಳ ಹೃದಯಗಳನ್ನು ಆಳಿದರು. ನವೆಂಬರ್ 13, 1967 ರಂದು ಜನಿಸಿದ ಜೂಹಿ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.57 ವರ್ಷದ ನಟಿ ವೈಯಕ್ತಿಕ ಜೀವನದ ಕಾರಣದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು.
17ನೇ ವಯಸ್ಸಿನಲ್ಲಿಯೇ ಮಿಸ್ ಇಂಡಿಯಾ ಪಟ್ಟ ಗೆದ್ದರು. 1986 ರಲ್ಲಿ ‘ಸುಲ್ತಾನತ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 1992 ರಲ್ಲಿ ‘ಕಾಬರ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರಿಗೆ ಜಯ್ ಮೆಹ್ತಾ ಪರಿಚಯವಾಗುತ್ತಾರೆ. ಅಷ್ಟೊತ್ತಿಗೆ ಜಯ್ ಮೆಹ್ತಾ ಅವರ ಮೊದಲ ಪತ್ನಿ ಸುಜಾತಾ ಬಿರ್ಲಾ ನಿಧನರಾಗಿದ್ದರು. ಈ ಭೇಟಿಯ ನಂತರ ಇಬ್ಬರೂ ಒಳ್ಳೆಯ ಸ್ನೇಹಿತರಾದರು.ಬಳಿಕ 1995 ರಲ್ಲಿ ವಿವಾಹವಾದರು.
ಮದುವೆಯ ನಂತರ ಜೂಹಿ ಚಾವ್ಲಾ ಸುಮಾರು 6 ವರ್ಷಗಳ ಕಾಲ ತನ್ನ ಸಂಬಂಧವನ್ನು ಮುಚ್ಚಿಟ್ಟರು. ಮೊದಲ ಗರ್ಭಧಾರಣೆಯವರೆಗೂ ತನ್ನ ಮದುವೆಯ ಸುದ್ದಿಯನ್ನು ರಹಸ್ಯವಾಗಿಟ್ಟಿದ್ದರು. ಜೂಹಿ ಗರ್ಭಿಣಿಯಾದಾಗ ಅವರ ಮದುವೆಯ ಸುದ್ದಿ ಹೊರಬಂತು.ಜಯ್ ಮೆಹ್ತಾ 2400 ಕೋಟಿ ಆಸ್ತಿಯನ್ನು ಹೊಂದಿರುವ ಭಾರತದ ಶ್ರೀಮಂತ ಉದ್ಯಮಿ ಆಗಿದ್ದಾರೆ. ಜಯ್ ಮೆಹ್ತಾ ‘ದಿ ಮೆಹ್ತಾ ಗ್ರೂಪ್’ ಸ್ಥಾಪಕರಾಗಿದ್ದಾರೆ. 4162 ಕೋಟಿ ರೂಪಾಯಿ ಮೌಲ್ಯದ ಕಂಪನಿ ಜಯ್ ಮೆಹ್ತಾ ಹೊಂದಿದ್ದಾರೆ. ವಿಶ್ವಾದ್ಯಂತ 15,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆ.ಜೂಹಿ ಚಾವ್ಲಾ 4600 ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದಾರೆ. ಸದ್ಯ ಜೂಹಿಗೆ 57 ವರ್ಷ ವಯಸ್ಸು. 2024 ರ ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಜೂಹಿ ಚಾವ್ಲಾ ಭಾರತೀಯ ಶ್ರೀಮಂತ ನಟಿ ಎಂದು ತಿಳಿದುಬಂದಿದೆ.