ನ್ಯೂಸ್ ನಾಟೌಟ್: ವಿದ್ಯುತ್ ಕಂಬವನ್ನು ಎತ್ತುವ ಸಮಯದಲ್ಲಿ ಸರಿಯಾದ ಮುಂಜಾಗ್ರತಾ ಕ್ರಮ ವಹಿಸದೆ ಇದ್ದುದರಿಂದ ಕೂಲಿ ಕೆಲಸದಾಳುವೊಬ್ಬರು ಕಂಬ ಬಿದ್ದು ದಾರುಣ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ಜಿಲ್ಲೆಯ ಕೊಕ್ಕಡ ಗ್ರಾಮದಲ್ಲಿ ಮಾ.16 ರಂದು ನಡೆದಿದೆ.
ಏನಿದು ಘಟನೆ..?
ದುರ್ಘಟನೆಯಲ್ಲಿ ಶಿವಪ್ಪ (40 ವರ್ಷ) ಮೃತಪಟ್ಟಿದ್ದಾರೆ. ಅವರು ಸುಮಾರು 6 ವರ್ಷಗಳಿಂದ ಕೊಕ್ಕಡ ನಿವಾಸಿ ಪುರುಷೋತ್ತಮ ಎಂಬವರ ಎಲೆಕ್ಟ್ರಿಕಲ್ಸ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮಾ.16 ರಂದು ಸಂಜೆ ಕೊಕ್ಕಡ ಗ್ರಾಮದ ಶ್ರೀರಾಮ ಭಜನಾ ಮಂದಿರದ ಬಳಿ ವಿದ್ಯುತ್ ಕಂಬವನ್ನು ಎತ್ತುವ ಸಮಯದಲ್ಲಿ ಕಂಬವು ಶಿವಪ್ಪರ ಮೇಲೆ ಬಿದ್ದಿದೆ. ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಕ್ಕಡ ನಿವಾಸಿ ರಂಜಿತ್ (23 ವರ್ಷ) ದೂರು ನೀಡಿದ್ದಾರೆ. ನನ್ನ ಚಿಕ್ಕಪ್ಪ ಸಾವಿಗೆ ವಿದ್ಯುತ್ ಕಂಬಗಳನ್ನು ಎತ್ತುವ ಸಮಯ ಅದರ ಭದ್ರತೆಗೆ ಬೇಕಾದ ಪರಿಕರಗಳನ್ನು ಸದ್ರಿ ಪುರುಷೋತ್ತಮ ಒದಗಿಸದೇ, ಮುಂಜಾಗ್ರತಾ ಕ್ರಮ ವಹಿಸದೇ ಇದ್ದುದ್ದರಿಂದ ಅವಘಡ ಸಂಭವಿಸಿದೆ ಎಂದು ಉಲ್ಲೇಖಿಸಿದ್ದಾರೆ. ಇವರ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 20/2026, ಕಲಂ: 106 ಬಿ ಎನ್‌ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.










