ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ವ್ಯಕ್ತಿಯೊಬ್ಬರ ಮೇಲೆ ಅವಹೇಳನಕಾರ ಸಂದೇಶದ ಆರೋಪವಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ. ಸದ್ಯ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.
ಏನಿದು ಘಟನೆ..?
ಸುಳ್ಯ ತಾಲೂಕು ಪಂಜದ ಗುರುಪ್ರಸಾದ್ ಎಂಬವರು ದಿನಾಂಕ 04-07-2019 ಮತ್ತು 05-07-2019 ರಂದು ತನ್ನ ಬಾಬ್ತು ಮೊಬೈಲ್ ನಿಂದ ಅವಹೇಳನಕಾರಿ ಮತ್ತು ವೈಮನಸ್ಸಿನ ಭಾವನೆಗಳು ಉಂಟಾಗುವ ರೀತಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಭಕ್ತರಿಗೆ ಮುಜುಗರ ಉಂಟುಮಾಡಿರುತ್ತಾರೆ ಎಂದು ಆರೋಪಿಸಿ ಸುಬ್ರಮಣ್ಯ ದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅರ್ಚಕ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ವರುಣ್ ಕುಮಾರ್ ಎಂಬುವವರು ದೂರು ನೀಡಿದ್ದರು. ಈ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆರೋಪಿ ಗುರುಪ್ರಸಾದ್ ಪಂಜ ರವರ ವಿರುದ್ದ ಪ್ರಕರಣ ದಾಖಲಾಗಿತ್ತು. ಆಗಿನ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಪಿಎಸ್ಐ ಓಮನ ಏನ್. ಕೆ ಇವರು ಪ್ರಕರಣದ ತನಿಖೆ ನಡೆಸಿ ಸುಳ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಳ್ಯದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಶಿವಣ್ಣ ಹೆಚ್.ಆರ್ ರವರು ಆರೋಪಿ ಗುರುಪ್ರಸಾದ್ ಪಂಜ ರವರ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಪಡಿಸುವರೇ ಅಭಿ ಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ದಿನಾಂಕ 25-2-2026 ರಂದು ಆರೋಪಿ ಗುರು ಪ್ರಸಾದ್ ಪಂಜ ರವರನ್ನು ಬಿಡುಗಡೆಗೊಳಿಸಿ ತೀರ್ಪು ನೀಡಿರುತ್ತಾರೆ. ಆರೋಪಿ ಗುರುಪ್ರಸಾದ್ ಪಂಜ ರವರ ಪರವಾಗಿ ಸುಳ್ಯದ ವಕೀಲ ಎಂ.ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ ಹಾಗೂ ಶ್ಯಾಮ್ ಪ್ರಸಾದ್ ಎನ್. ಕೆ ವಾದಿಸಿದ್ದರು.










