ನ್ಯೂಸ್ ನಾಟೌಟ್: ಜನಪರ ಕಾಳಜಿ ವಹಿಸಿರುವ ಲಯನ್ಸ್ ಕ್ಲಬ್ ಸುಳ್ಯ ಇದೀಗ ಮತ್ತೊಂದು ಹೆಜ್ಜೆಯನ್ನು ಇರಿಸಿದೆ. ಸುಳ್ಯದ ಜ್ಯೋತಿ ಸರ್ಕಲ್ ಬಳಿ ಸುಸಜ್ಜಿತ ಆಂಬ್ಯುಲೆನ್ಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ಕುಡ್ಪಿ ಅರವಿಂದ ಶೆಣೈ ನೆರವೇರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ದೀಪಕ್ ಕುತ್ತಮೊಟ್ಟೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫಾ, ಲಯನ್ಸ್ ಕ್ಲಬ್ ಸುಳ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಪ್ರಸಾದ್, ಲಯನ್ಸ್ ಕ್ಲಬ್ ಸುಳ್ಯ ಖಜಾಂಚಿ ಲಯನ್ ಜತ್ತಪ್ಪ ರೈ, ಲಯನ್ ಪಿಎಂ ರಂಗನಾಥ್ mif, ಲಯನ್ ರಾಮಕೃಷ್ಣ ರೈ mif, ಲಯನ್ ಜೀವನ್ ರೈ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.

ಸುಳ್ಯದ ಶ್ರೀರಾಮಪೇಟೆಯಲ್ಲಿ ಆಟೋ ರಿಕ್ಷಾ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ, ಕುರುಂಜಿಭಾಗ್ ನಲ್ಲಿ ಆಟೋ ರಿಕ್ಷಾ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ, ಸುಳ್ಯ ಬಸ್ ನಿಲ್ದಾಣ ಬಳಿಯ ರಿಕ್ಷಾ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ, ಕೊಡಿಯಾಲಬೈಲು ಸ.ಕಿ.ಪ್ರಾ.ಶಾಲೆಯ ಒಂದು ಎಕ್ರೆ ಜಾಗದಲ್ಲಿ ಅಡಿಕೆ ತೋಟ ನಿರ್ಮಾಣ ಹೀಗೆ ಸುಳ್ಯದ ಲಯನ್ಸ್ ಸದಸ್ಯರು ಮಾಡಿದ ಶಾಶ್ವತ ಕಾರ್ಯಗಳು ಹಲವಾರಿವೆ. ಈ ಪಟ್ಟಿಗೆ ಈಗ ಇನ್ನೊಂದು ಸೇರ್ಪಡೆಯಾಗಿರುವುದು ವಿಶೇಷ. ಆಂಬ್ಯುಲೆನ್ಸ್ ನಿಲ್ದಾಣದ ಅವಶ್ಯಕತೆ ಇತ್ತು. ಇದೀಗ ಈ ಸಮಸ್ಯೆ ಬಗೆ ಹರಿದಂತಾಗಿದೆ.













