ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ ಸರಬರಾಜು ವಾಹನದಿಂದಲೇ 8 ಸಿಲಿಂಡರ್ ಕದ್ದ ಕಳ್ಳರು! ಇಬ್ಬರು ಗ್ಯಾಸ್ ಕಳ್ಳರ ಬಂಧನ!!

ನ್ಯೂಸ್ ನಾಟೌಟ್ :


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಇಲ್ಲಿಯವರೆಗೆ ಚಿನ್ನ ,ಬೆಳ್ಳಿ , ನಗದು ಕಳ್ಳತನದ ಸುದ್ದಿಯನ್ನು ಓದ್ತಾ ಇದ್ವಿ,ಇದೀಗ ಕಳ್ಳರು ಕೂಡ ಕಾಲಕ್ಕೆ ತಕ್ಕಂತೆ ಹೊಸತನಕ್ಕೆ ತೆರೆದುಕೊಂಡಿದ್ದಾರೆ.ಗ್ಯಾಸ್ ಸಿಲಿಂಡರ್ ಗೆ ಈಗ ಡಿಮ್ಯಾಂಡ್ ಹೆಚ್ಚುತ್ತಿದ್ದಂತೆ ಸಿಲಿಂಡರ್ ಕಳ್ಳರು ಅಲ್ಲಲ್ಲಿ ಹುಟ್ಟಿ ಕೊಳ್ಳುತ್ತಿದ್ದಾರೆ.

ಮನೆಮುಂದೆ ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ (Gas Cylinder) ಸರಬರಾಜು ವಾಹನದಿಂದಲೇ ಸಿಲಿಂಡರ್ ಕದ್ದು ಕಳ್ಳರು ಎಸ್ಕೇಪ್ ಆಗಿದ್ದರು. ಇದೀಗ ಆ ಇಬ್ಬರು ಖದೀಮರನ್ನ ಬಂಧಿಸುವಲ್ಲಿ ಬೆಂಗಳೂರಿನ ಬಿಡದಿ ಪೊಲಿಸರು (Bidadi Police) ಯಶಸ್ವಿಯಾಗಿದ್ದಾರೆ.

ಮಹೇಶ್ ನಾಯಕ್ (19), ಗೋವಿಂದರಾಜು (20) ಬಂಧಿತ ಆರೋಪಿಗಳು. ರಾಮನಗರ (Ramanagara) ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಮನೆಮುಂದೆ ನಿಂತಿದ್ದ ಗ್ಯಾಸ್ ಸರಬರಾಜು ವಾಹನದಲ್ಲಿ 8 ಸಿಲಿಂಡರ್ ಕದ್ದು ಖದೀಮರು ಎಸ್ಕೇಪ್ ಆಗಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸದ್ಯ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು, ಬಂಧಿತ ಆರೋಪಿಗಳಿಂದ 8 ಗ್ಯಾಸ್ ಸಿಲಿಂಡರ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಬೈಕ್ ವಶಕ್ಕೆ ಪಡೆಯಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles