ಚೀನಾ ಲಿಂಕ್ ಹೊಂದಿರುವ ಮಂಗಳೂರಿನ ಸೈಬರ್ ವಂಚಕರ ಬಂಧನ

ನ್ಯೂಸ್ ನಾಟೌಟ್ : ಮ್ಯೂಲ್ ಅಕೌಂಟ್​ಗಳ ವಿರುದ್ಧದ ಕಾರ್ಯಾಚರಣೆ ವೇಳೆ ಚೀನಾ ಲಿಂಕ್ ಹೊಂದಿದ್ದ ಮಂಗಳೂರಿನ ಸೈಬರ್ ವಂಚಕರಿಬ್ಬರನ್ನು ರಾಜ್ಯ ಸೈಬರ್ ಕಮಾಂಡ್ ಯೂನಿಟ್​​ ಬಂಧಿಸಿದೆ. ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಅನೀಸ್ ಮತ್ತು ಸಲೀತ್ ಅಹ್ಮದ್​​​ರನ್ನ ಬಂಧಿಸಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಬಂಧಿತ ವಂಚಕರು ಟ್ರೇಡಿಂಗ್ ಬಿಸಿನೆಸ್ ಹೆಸರಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿದ್ದರು. ಬಳಿಕ ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳ ವಿವರ ಬಳಕೆ ಮಾಡುತ್ತಿದ್ದರು. ನಿಖರ ಮಾಹಿತಿ‌ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ಮೊಬೈಲ್ ಫೋನ್‌ಗಳು, 18 ಬಿಟ್ ಕಾರ್ಡ್‌ಗಳು, 17 ಬ್ಯಾಂಕ್ ಪಾಸ್‌ಬುಕ್‌ಗಳು, 6 ಚೆಕ್ ಪುಸ್ತಕಗಳು, 1,479.31 USDT (ಕ್ರಿಪ್ಟೋಕರೆನ್ಸಿ) 1 ಕಾರನ್ನು ವಶಕ್ಕೆ ಪಡೆಯಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles