ʻ ಮುರಿದುಬಿದ್ದಿದ್ದ ರಶ್ಮಿಕಾ-ರಕ್ಷಿತ್‌ ಸಂಬಂಧ : ತಾಯಿ ಸುಮನ್‌ ಮಂದಣ್ಣರದ್ದು ಎನ್ನಲಾದ ಆಡಿಯೋ ವೈರಲ್‌!

ನ್ಯೂಸ್ ನಾಟೌಟ್ :ನ್ಯಾಷನಲ್‌ ಕ್ರಶ್ ರಶ್ಮಿಕಾ ಮಂದಣ್ಣ ಫೆಬ್ರವರಿ 6 ರಂದು ವಿಜಯ್‌ ದೇವರಕೊಂಡ ಅವರನ್ನ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಇತ್ತೀಚೆಗೆ ಅವರ ವೆಡ್ಡಿಂಗ್‌ ರಿಸೆಪ್ಷನ್‌ ಕೂಡ ಸಖತ್‌ ಗ್ರ್ಯಾಂಡ್‌ ಆಗಿ ನಡೆಯಿತು. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಇವರ ವಿವಾಹ ಸಂಭ್ರಮ ಮಾತ್ರ ಇನ್ನೂ ಮುಂದುವರೆದಿದೆ. ರಶ್ಮಿಕಾ ಹಾಗೂ ವಿಜಯ್‌ ಮದುವೆಯ ಫೋಟೋಗಳನ್ನ ಹಂಚಿಕೊಳ್ಳುತ್ತಲೇ ಇದ್ದಾರೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ಮಂದಣ್ಣ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋ ಕ್ಲಿಪ್‌ ವೈರಲ್‌ ಆಗುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವೈರಲ್‌ ಆಗುತ್ತಿರುವ ಆಡಿಯೋ ಕ್ಲಿಪ್‌ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ಅವರದ್ದು ಎನ್ನಲಾಗುತ್ತಿದೆ. ಮುಖ್ಯವಾಗಿ ರಕ್ಷಿತ್‌ ಶೆಟ್ಟಿ ಅವರ ಬಗ್ಗೆ ಕೆಲವು ವಿಷಯಗಳನ್ನ ಚರ್ಚಿಸಲಾಗಿದೆ.

ಆಡಿಯೋದಲ್ಲಿ ಏನಿದೆ?

“ಒಳಗಡೆ ತುಂಬಾ ನಡೆದಿದೆ. ನಾನು ಸ್ಟ್ರಾಂಗ್‌ ಆಗಿರೋದಕ್ಕೆ ಬಚಾವ್.‌ ನಮ್ಮ ಹುಡುಗಿ ಹೇಗೆ ಬೆಳಿತಿದ್ದಾಳೆ ಅಂತ ಖುಷಿ ಪಡಬೇಕು. ಏನು ವಿಷ್ಯ ಇದ್ರು ಇವನು ತಲೆ ಹಾಕೋದು ಯಾಕೆ. ನಾನು ಯಾವ ಗ್ಯಾರೆಂಟಿಯಲ್ಲಿ ಮದುವೆ ಮಾಡಿಕೊಡಲಿ ಇವರಿಗೆ? 21 ವರ್ಷದ ಹುಡುಗಿಯನ್ನ 35 ವರ್ಷ ಹುಡುಗನಿಗೆ ಮದುವೆ ಮಾಡಿ ಕೊಡಲು ಒಪ್ಪಿದ್ದೆ ನನ್ನ ದೊಡ್ಡತನ. ಆವತ್ತು ಒಂದಿನ 2 ಗಂಟೆಗೆ ರಶ್ಮಿಕಾ ಸಿನಿಮಾ ಕುರಿತ ಇಂಟರ್ವ್ಯೂ ಮುಗಿದಿದೆ. ನೀನು ಕಾರು ತಗೊಂಡು ಬಾ ರಕ್ಷಿತ್‌ನ ನೋಡೋಕೆ ಅಂತ ಹೇಳ್ತಿದ್ದಾರೆ. ಇವರು ಮನುಷ್ಯರಾ ಇವರು? ನನ್ನ ಮಗಳಿಗೆ ಏನಾದರೂ ತೊಂದರೆಯಾದ್ರೆ ಯಾರು ಹೊಣೆ? ಆಗ ರಶ್ಮಿಕಾ ಹೇಳಿದ್ಲು ನಾನು ಬರೋದಕ್ಕೆ ಆಗಲ್ಲ, ನನಗೆ ಇವತ್ತಿನ ದಿನ ಇಂಟರ್ವ್ಯೂ ತುಂಬಾ ಇಂಪಾರ್ಟೆಂಟ್‌ ಅಂತ” ಎಂದು ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ

ನೀನು ಎಲ್ಲವನ್ನೂ ಬಿಟ್ಟು ಬಂದು ಟ್ವೀಟ್‌ ಮಾಡಬೇಕು, ನೀನು ಇನ್ಮುಂದೆ ಯಾವ ಸಿನಿಮಾನೂ ಮಾಡಲ್ಲ ಅಂತ ಹೇಳ್ಬೇಕು ಅಂತ ರಶ್ಮಿಕಾಗೆ ಹೇಳಿದ್ರು. ಅವರ ಅಮ್ಮ ಬಂದು ನಿನ್ನ ಅಮ್ಮ ನನಗೆ ಸಾರಿ ಕೇಳ್ಬೇಕು ಅಂತ ಹೇಳಿದ್ರು. ಹುಡುಗ ಹುಡುಗಿಯನ್ನ ಒಂದು ಮಾಡೋದಾ? ಅಥವಾ ಅವರನ್ನ ದೂರ ಮಾಡೋದಾ? ಸಂಬಂಧ ಒಡೆದದ್ದು ನನ್ನ ಪುಣ್ಯ, ಅದು ಬೇರೆ ವಿಷಯ” ಎಂದು ರಕ್ಷಿತ್‌ ಶೆಟ್ಟಿ ತಾಯಿ ಬಗ್ಗೆಯೂ ಆವೇಶದ ಮಾತುಗಳನ್ನಾಡಿದ್ದಾರೆ ರಶ್ಮಿಕಾ ತಾಯಿ.

ಹಲವು ಸಂದರ್ಭಗಳಲ್ಲಿ ಇಂತಹ ವೈರಲ್‌ ಆಡಿಯೋಗಳು ಫೇಕ್‌ ಅಥವಾ ಎಡಿಟ್‌ ಮಾಡಿದ್ದಾಗಿರುವ ಸಾಧ್ಯತೆಯೂ ಇರುತ್ತವೆ. ಆದರೆ, ಈ ಆಡಿಯೋ ರಶ್ಮಿಕಾ ಮಂದಣ್ಣ ಅವರ ತಾಯಿ ಅವರದ್ದೇನಾ ಅನ್ನೋ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ರಶ್ಮಿಕಾ ಮಂದಣ್ಣ ಮೊದಲು ರಕ್ಷಿತ್‌ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ನಂತರ ಆ ಸಂಬಂಧ ಮುರಿದುಹೋಯ್ತು. ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಜಯ್‌ ದೇವರಕೊಂಡ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles