22.4 C
Sullia
Saturday, March 7, 2026

ನಿಯತ್ತಿನ ಚಾರ್ಲಿ ಜೊತೆ ಫೋಟೋ ಪೋಸ್ಟ್‌ ಮಾಡಿದ ರಕ್ಷಿತ್ ಶೆಟ್ಟಿ; ಹಳೆಯದನ್ನು ಮರೆಯಿರಿ ಎಂದ ಫ್ಯಾನ್ಸ್!

ನ್ಯೂಸ್ ನಾಟೌಟ್ : ಸ್ಯಾಂಡಲ್​ವುಡ್ ನಟ ರಕ್ಷಿತ್ ಶೆಟ್ಟಿಯ ಪತ್ತೆಯೇ ಇಲ್ಲ ಎನ್ನುವುದು ಅವರ ಅಭಿಮಾನಿಗಳ ಆರೋಪ. ಸಿಂಪಲ್ ಸ್ಟಾರ್ ಮತ್ತೆ ಯಾವಾಗ ಬೆಳ್ಳಿತೆರೆಯ ಮೇಲೆ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗಲೇ ಅವರ ಪೋಸ್ಟ್ ಈಗ ವೈರಲ್ ಆಗಿದೆ. ಅಷ್ಟಕ್ಕೂ ಆ ಪೋಸ್ಟ್ ಏನು? ಅದರಲ್ಲಿ ನಟ ಹೇಳಿದ್ದೇನು?


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸ್ಯಾಂಡಲ್​ವುಡ್​ನ ಯುವ ಸಿನಿ ಪ್ರೇಮಿಗಳ ಫೇವರಿಟ್ ಆ್ಯಕ್ಟರ್, ಡೈರೆಕ್ಟರ್ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಯುವತಿಯರ ಕ್ರಶ್ ಆದರು. ಆ ನಂತರ ಹಲವು ಸಿನಿಮಾ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ಸಪ್ತ ಸಾಗರದಾಚೆ ಸಿನಿಮಾ ಮೂಲಕ ಯುವಕರ ಫೇವರಿಟ್ ಆದ್ರು.

ತಮ್ಮ ನಿರ್ದೇಶನ ಹಾಗೂ ನಟನೆ ಮೂಲಕ ಸದ್ದು ಮಾಡಿದ ರಕ್ಷಿತ್ ಶೆಟ್ಟಿ ಈಗ ಎಲ್ಲಿದ್ದಾರೆ ಎನ್ನುವುದೇ ಯಾರಿಗೂ ಗೊತ್ತಿಲ್ಲ. ಶೆಟ್ರೇ ಬೇಗ ವಾಪಸ್ ಬನ್ನಿ, ನಿಮ್ಮ ಕಮ್ ಬ್ಯಾಕ್ ಸೂಪರ್ ಆಗಿರಬೇಕು ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ ಜನ. ಎಲ್ಲರೂ ನಟನ ಸಿನಿಮಾ ನಿರೀಕ್ಷೆಯಲ್ಲಿದ್ದಾರೆ.

ಹೀಗಿರುವಾಗಲೇ ರಕ್ಷಿತ್ ಶೆಟ್ಟಿ 777ಚಾರ್ಲಿಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ನಾಯಿಯ ಜೊತೆ ಕುಳಿತಿರುವ ಫೋಟೋ ಶೇರ್ ಮಾಡಿದ ಅವರು ಫೋಟೋ ಜೊತೆ ಯಾವುದೇ ಕ್ಯಾಪ್ಶನ್ ಬರೆದಿಲ್ಲ. ಸದ್ಯ ಫೋಟೋಗೆ ಅಭಿಮಾನಿಗಳು ವಿಭಿನ್ನವಾಗಿ ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles