22.4 C
Sullia
Saturday, March 7, 2026

ಪ್ರವಾಸಿಗರಿಗೆ ಬಾಯ್ ಹೇಳುತ್ತಿರುವ ಪಂಚ್ , ದಯನೀಯ ಸ್ಥಿತಿಯಿಂದಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಮರಿ ಕೋತಿ

ನ್ಯೂಸ್ ನಾಟೌಟ್ : ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಜಪಾನ್‌ನ ಪುಟ್ಟ ಕೋತಿ ‘ಪಂಚ್’, ಈಗ ತನ್ನ ಮುದ್ದಾದ ವರ್ತನೆಯಿಂದಾಗಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget


ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಏಳು ತಿಂಗಳ ಈ ಜಪಾನೀಸ್ ಮಕಾಕ್ (Macaque) ಕೋತಿ, ಪ್ರವಾಸಿಗರಿಗೆ ಕೈಬೀಸಿ ‘ಗುಡ್ ಬೈ’ ಹೇಳುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.


ಪಂಚ್ ಜನ್ಮ ನೀಡಿದ ತಾಯಿಯಿಂದಲೇ ತಿರಸ್ಕರಿಸಲ್ಪಟ್ಟಿದ್ದ ಕೋತಿ. ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ಇದನ್ನು ಬಿಟ್ಟು ಹೋಗಿದ್ದರಿಂದ, ಮೃಗಾಲಯದ ಸಿಬ್ಬಂದಿಯೇ ಇದನ್ನು ಮಗುವಿನಂತೆ ಸಾಕಿ ಬೆಳೆಸಿದ್ದರು. ಆರಂಭದಲ್ಲಿ ಇತರ ಕೋತಿಗಳ ಗುಂಪಿಗೆ ಸೇರಿದಾಗ, ದೊಡ್ಡ ಕೋತಿಗಳು ಇದನ್ನು ಪೀಡಿಸುತ್ತಿದ್ದವು. ಆ ಸಮಯದಲ್ಲಿ ಪಂಚ್ ತನ್ನ ರಕ್ಷಣೆಗಾಗಿ ಒಂದು ‘ಆರೆಂಗುಟನ್’ ಬೊಂಬೆಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂರುತ್ತಿದ್ದ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು.


ದಿನಗಳು ಕಳೆದಂತೆ ಪಂಚ್ ಈಗ ಚೇತರಿಸಿಕೊಂಡಿದ್ದು, ಮೃಗಾಲಯಕ್ಕೆ ಬರುವ ಪ್ರವಾಸಿಗರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದಾನೆ. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ, ಪಂಚ್ ತನ್ನ ಪುಟ್ಟ ಕೈಯನ್ನು ಎತ್ತಿ ಜನರಿಗೆ ಕೈಬೀಸುತ್ತಿರುವ ದೃಶ್ಯವಿದೆ. ಇದನ್ನು ಕಂಡ ಪ್ರವಾಸಿಗರು “ಪಂಚ್ ನಮಗೆ ಗುಡ್ ಬೈ ಹೇಳುತ್ತಿದ್ದಾನೆ’ ಎಂದು ಸಂಭ್ರಮಿಸುತ್ತಿದ್ದಾರೆ

Related Articles

LEAVE A REPLY

Please enter your comment!
Please enter your name here

Latest Articles