ನ್ಯೂಸ್ ನಾಟೌಟ್ : ಆಂಧ್ರಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ಆಘಾತಕಾರಿ ಘಟನೆಯ ವಿಡಿಯೋ
ಎಲ್ಲೆಡೆ ಹರಿದಾಡುತ್ತಿದೆ. ಆಂಧ್ರದ ಎನ್‌ಟಿಆರ್ ಜಿಲ್ಲೆಯ ಬಾಪುಲಪಾಡು ಮಂಡಲದ ವೀರವಳ್ಳಿಯಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ.
ಒಂದು ಸಣ್ಣ ಕಾರಣ ಜಗಳಕ್ಕೆ ಕಾರಣವಾಯಿತು. ಆ ಬಾಲಕನನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಅಲ್ಲಿದ್ದ ಇತರೆ ಬಾಲಕರು ಆತನನ್ನು ತಡೆಯಲು ಹೋಗಿದ್ದಾರೆ. ಆದರೂ ಆತ ಸುಮ್ಮನಾಗಿಲ್ಲ.













