ನ್ಯೂಸ್ ನಾಟೌಟ್: ಯುವ ಘಟಕ – ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಇದರ ವತಿಯಿಂದ ಒಕ್ಕಲಿಗ ಪ್ರೀಮಿಯರ್ ಲೀಗ್ (ವಿಪಿಎಲ್) 2026 ಸೀಸನ್ -3 ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ಅಂತರ್ ಜಿಲ್ಲಾ ಕ್ರಿಕೆಟ್ ಮತ್ತು ಜಿಲ್ಲಾ ಮಟ್ಟದ ಥ್ರೋಬಾಲ್ ಕೂಟವು ಮಾ 7 ಹಾಗೂ 8 ರಂದು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಾಟವು ಬೆಳಗ್ಗೆ 7.30 ಪ್ರಾರಂಭಗೊಳ್ಳಲ್ಲಿದ್ದು ಉದ್ಘಾಟನಾ ಸಮಾರಂಭವು ಮಾ.7ರ ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ. ಥ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭವು ಶನಿವಾರ ಸಂಜೆ 7.00 ಗಂಟೆಗೆ ನೆರವೇರಲಿದೆ. ಸಮಾರಂಭದಲ್ಲಿ ಅನೇಕ ಗಣ್ಯರು ಅತಿಥಿಗಳು ಭಾಗವಹಿಸಲಿದ್ದಾರೆ. ಒಕ್ಕಲಿಗರ ಪ್ರೀಮಿಯರ್ ಲೀಗ್ 2026 ಮಂಗಳೂರು ಇದರ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಒಕ್ಕಲಿಗ ಸಮುದಾಯದ 12 ಮಾಲೀಕತ್ವದ ತಂಡಗಳು ಭಾಗವಹಿಸಲಿವೆ.













