21.6 C
Sullia
Saturday, March 7, 2026

ಫರಂಗಿಪೇಟೆ: ನದಿ ನಾರೆಯಲ್ಲಿ ಪತ್ತೆಯಾದ ರಾಶಿ ರಾಶಿ ಆಧಾರ್ ಕಾರ್ಡ್! ಚರ್ಚೆಯ ವಿಷಯವಾದ ಘಟನೆ

ನ್ಯೂಸ್ ನಾಟೌಟ್ : ಫರಂಗಿಪೇಟೆ ಸಮೀಪದ 10ನೇ ಮೈಲ್‌ಕಲ್ಲು ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ಆಧಾರ್‌ಕಾರ್ಡ್‌ಗಳ ರಾಶಿ ಪತ್ತೆಯಾಗಿದೆ.,


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಪರಿಶೀಲಿಸಿದಾಗ ಅದು ಪುದು ಗ್ರಾಮದ ನಾಗರಿಕರ ವಿಳಾಸಗಳನ್ನು ಹೊಂದಿರುವುದರಿಂದ ಹಲವು ಅನುಮಾನಗಳನ್ನು ಸೃಷ್ಟಿಸಿದೆ.
ಮಾ. 3ರಂದು ಸಂಜೆ ನದಿಯಲ್ಲಿ ಕಿನಾರೆ ಭಾಗದಲ್ಲಿ ನೀರಿನಲ್ಲಿ ರಾಶಿ ರಾಶಿ ಆಧಾರ್‌ಕಾರ್ಡ್‌ಗಳು ತೇಲುತ್ತಿರುವುದನ್ನು ಸ್ಥಳೀಯರೊಬ್ಬರು ಕಂಡಿದ್ದು, ಅವರು ಗ್ರಾ.ಪಂ.ಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅದು ಗ್ರಾಮಸ್ಥರದ್ದೇ ಆಧಾರ್‌ಕಾರ್ಡ್‌ ಆಗಿದ್ದು, ನದಿಗೆ ಹೇಗೆ ಹೋಯಿತು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಸದ್ಯಕ್ಕೆ ಇದು ತೀವ್ರ ಚರ್ಚೆಯ ವಿಷಯವಾಗಿದೆ.

ಈ ಕುರಿತು ಗ್ರಾ. ಪಂ. ಅಧ್ಯಕ್ಷರು ಪ್ರತಿಕ್ರಿಯಿಸಿ, ಆಧಾರ್‌ಕಾರ್ಡ್‌ಗಳಲ್ಲಿ ಹಲವು ಬದಲಾವಣೆಗಳ ಕಾರಣಕ್ಕೆ ಗ್ರಾಮಸ್ಥರು ಅರ್ಜಿ ಹಾಕಿ ಅಂಚೆಯ ಮೂಲಕ ಕಾರ್ಡ್ ಬರುತ್ತದೆ ಎಂದು ಕಾದು ಕಾದು ಬಳಿಕ ಸೈಬರ್‌ಗಳಲ್ಲಿ ಪ್ರತಿಗಳನ್ನು ತೆಗೆಯುತ್ತಿದ್ದರು. ಆದರೆ ಆಧಾರ್‌ಕಾರ್ಡ್ ಬಂದಿದ್ದರೂ ಅದನ್ನು ಹಂಚಿಕೆ ಮಾಡಿಲ್ಲ ಎಂದು ಅವರು ಅಂಚೆ ಇಲಾಖೆಯ ವಿರುದ್ಧ ಆರೋಪಗಳನ್ನು ಹೊರಿಸಿದ್ದಾರೆ.


ಸದ್ಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದು ಅನುಮಾನಗಳನ್ನು ಹುಟ್ಟುಹಾಕಿದ್ದು, ಸಂಬಂಧಪಟ್ಟ ಅಧಿಕಾರಿಗಳೇ ಗ್ರಾಮಸ್ಥರಿಗೆ ಹಂಚದೆ ಬಿಸಾಡಿದ್ದಾರೆಯೇ ಅಥವಾ ಅದು ನದಿ ಸೇರುವುದಕ್ಕೆ ಕಾರಣ ಏನು ಎಂಬುದರ ಕುರಿತು ತನಿಖೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles