22.4 C
Sullia
Saturday, March 7, 2026

ಸಜ್ಜನ ಪ್ರತಿಷ್ಠಾನ ಸ್ಥಾಪಕರಿಂದ ಕನ್ನಡ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಹಂಚಿಕೆ, ತನ್ನೂರಿನ ಕಲಿತ ಶಾಲೆ ಮಕ್ಕಳಿಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಿದ ಉಮ್ಮರ್ ಬೀಜದ ಕಟ್ಟೆ

ನ್ಯೂಸ್ ನಾಟೌಟ್: ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ ಸಹೋದರರು ತಾವು ಕಲಿತ ಕನ್ನಡ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಹಂಚಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಡಾ| ಉಮ್ಮರ್ ಬೀಜದಕಟ್ಟೆ ಯವರು ಸಂಪಾಜೆಯ ಗೂನಡ್ಕದ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ. ಪ್ರಸ್ತುತ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಸಾಹಿತ್ಯ ಆರಾಧಕರಾಗಿರುವ ಉಮ್ಮರ್ ಬೀಜದಕಟ್ಟೆ ಗೂನಡ್ಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ಇದೀಗ ತಮ್ಮ ಊರಿನ, ತಾವು ಕಲಿತ ಶಾಲೆಯ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಈ ಹಿಂದೆ ಅದೇ ಶಾಲೆಯ ಮಕ್ಕಳಿಗೆ ಬ್ಯಾಗ್, ಶೂ, ಕೊಡೆ, ಟೀ ಶರ್ಟ್ ಉಚಿತವಾಗಿ ವಿತರಿಸಿದ್ದರು. ಮುಂಬರುವ ಆಗಸ್ಟ್ 15ರಂದು ಮಕ್ಕಳಿಗೆ ಉಚಿತವಾಗಿ ಟೀ ಶರ್ಟ್ ನೀಡುವುದಕ್ಕೆ ನಿರ್ಧರಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿಎಂಸಿ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles