22.4 C
Sullia
Saturday, March 7, 2026

ಕನ್ನಡದಲ್ಲಿ ಪ್ರಾಪರ್ಟಿ ಕಾಮಿಡಿ ಮೊದಲು ಶುರು ಮಾಡಿದ್ದು ಯಾರು? ಗಿಲ್ಲಿ ಅಲ್ವ?ಶುರುವಾಗಿದೆ ಚರ್ಚೆ! ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಈ ಮೊದಲು ಪ್ರಾಪರ್ಟಿ ಕಾಮಿಡಿ ಮೂಲಕ ಗಮನ ಸೆಳೆದರು. ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರಾಪರ್ಟಿ ಕಾಮಿಡಿ ಮೊದಲು ಮಾಡಿದವರು ಯಾರು ಎಂಬುದನ್ನು ಹೇಳಲಾಗಿದೆ. ಹಾಗಾದರೆ, ಗಿಲ್ಲಿ ನಟ ಅವರಿಗಿಂತ ಮೊದಲು ಪ್ರಾಪರ್ಟಿ ಕಾಮಿಡಿ ಮಾಡಿದ್ದು ಯಾರು ಎಂಬುದನ್ನು ತಿಳಿಯೋಣ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ವೈರಲ್ ವಿಡಿಯೋದಲ್ಲಿ ಗಿಲ್ಲಿಯ ಪ್ರಾಪರ್ಟಿ ಕಾಮಿಡಿಯನ್ನು ತೋರಿಸಲಾಗಿದೆ. ಅವರಿಗಿಂತ ಮೊದಲು ಈ ರೀತಿ ಕಾಮಿಡಿ ಮಾಡಿದ್ದು ವಿಷ್ಣುವರ್ಧನ್ ಎಂದು ತೋರಿಸಲಾಗಿದೆ. ಸಿನಿಮಾ ಒಂದರಲ್ಲಿ ದೋಸೆ ಹಾಗೂ ಈರುಳ್ಳಿಯನ್ನು ತಂದಿಟ್ಟು ಅದರಲ್ಲಿಯೇ ಅವರು ಪ್ರಾಪರ್ಟಿ ಕಾಮಿಡಿ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಅನೇಕರು ಇದನ್ನು ಒಪ್ಪಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರಾಪರ್ಟಿ ಕಾಮಿಡಿ ಸಾಕಷ್ಟು ಬಳಕೆ ಆಗುತ್ತಿತ್ತು.

ಗಿಲ್ಲಿ ನಟ ಅವರು ಸದ್ಯ ವಿವಿಧ ಉತ್ಸವಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುವ ಆಲೋಚನೆ ಅವರಿಗೆ ಇದೆ. ಈ ವಿಷಯದಲ್ಲಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅವರು ಇನ್​​ಸ್ಟಾದಲ್ಲಿ 2 ಮಿಲಿಯನ್​ಗೂ ಅಧಿಕ ಹಿಂಬಾಲಕರನ್ನು ಪಡೆದಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles