ನ್ಯೂಸ್ ನಾಟೌಟ್: ಜೇಸಿಐ ಸುಳ್ಯ ಪಯಸ್ವಿನಿ ವಲಯಕ್ಕೆ ಫೆ.22ರಂದು ಜೆಸಿಐ ಸುಳ್ಯ ಪಯಸ್ವಿನಿ ಘಟಕದ ವಲಯ ಉಪಾಧ್ಯಕ್ಷ ಜೇಸಿ ಸೆನೆಟರ್ ಜಿತೇಶ್ ಪಿರೇರಾ ಅಧಿಕೃತ ಭೇಟಿ ನೀಡಿದರು. ಆಡಳಿತ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಕಾರ್ಯಕ್ರಮ ನಡೆಯಿತು.
ಈ ವೇಳೆ ನಡೆದ ಸಾಮಾನ್ಯ ಸಭೆಯಲ್ಲಿ ಜೆಸಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವಾಧ್ಯಕ್ಷರಾದ ಜೆ.ಎಫ್. ಎಮ್ ಸುರೇಶ್ ಕಾಮತ್, ಮುಖ್ಯ ಅತಿಥಿಗಳಾಗಿ ಪಯಸ್ವಿನಿ ಸೀನಿಯರ್ ಛೆಂಬರ್ ಇಂಟರ್ ನ್ಯಾಶನಲ್ ಇದರ ಅಧ್ಯಕ್ಷ ಜೇಸಿ. ಹೆಚ್.ಜಿ.ಎಫ್. ಜಯಪ್ರಕಾಶ್ ಕೆ. , ಕಾರ್ಯದರ್ಶಿ ಜೇಸಿ ತಾರ ಮಾಧವ ಚೂoತಾರು ಉಪಸ್ಥಿತರಿದ್ದರು.
ಸಾಮಾನ್ಯ ಸಭೆಯಲ್ಲಿ ಘಟಕದಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಘಟಕದ ಕಾರ್ಯಚಟುವಟಿಕೆಗಳನ್ನು ಕಾರ್ಯದರ್ಶಿ ಸಭೆಗೆ ಮಂಡಿಸಿದರು. ಪೂರ್ವ ವಲಯಾಧ್ಯಕ್ಷ ಪಿಪಿಪಿ ಅಶೋಕ್ ಚೂoತಾರ್ , ಜೆಸಿ ದೇವರಾಜ್ ಕುದ್ಪಾಜೆ, ಜೆಸಿ ಹೆಚ್.ಜಿ.ಎಫ್ ನವೀನ ಕುಮಾರ್, ಜೇಸಿ. ರವಿಕುಮಾರ್, ಸುಪ್ರೀತ್ ಮೋoಟಡ್ಕ, ಶಂಕರ್ ಪೆರಾಜೆ, ಜಯಲಕ್ಷ್ಮಿ, ಲೀಲಾವತಿ, ರಂಜಿತ್ ಪೂಜಾರಿ, ಕೇಶವ, ಮಹೇಶ್ ಬೆಳ್ಳಾರ್ಕರ್, ಮಂಜುನಾಥ್, ಅಶೋಕ್ ಅಡ್ಕಾರ್ ಮೊದಲದವರು ಉಪಸ್ಥಿತರಿದ್ದರು. ಜೇಸಿ ಶೋಭಾ ಅಶೋಕ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಜೇಸಿ.ಸುನಿತಾ ರವಿ ಕುಮಾರ್ ಜೇಸಿವಾಣಿ ವಾಚಿಸಿದರು. ಜೇಸಿ. ವಿನೋದ್ ಮೂಡಗದ್ದೆ ವಲಯ ಉಪಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು.













