21.6 C
Sullia
Saturday, March 7, 2026

ದೇಶಾದ್ಯಂತ ಅನ್ನದಾನ ಮಾಡಿ, ಸಿಹಿ ಹಂಚಲಿರುವ ರಶ್ಮಿಕಾ, ವಿಜಯ್ !

ನ್ಯೂಸ್ ನಾಟೌಟ್ : ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ  ಅವರ ಮದುವೆ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕುಟುಂಬದ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತರು ಈ ಮದುವೆಗೆ ಸಾಕ್ಷಿಯಾದರು. ಅಭಿಮಾನಿಗಳನ್ನು ಆಹ್ವಾನಿಸಲು ಸಾಧ್ಯವಾಗಿಲ್ಲ. ಹಾಗಿದ್ದರೂ ಕೂಡ ತಮ್ಮ ಮದುವೆಯ ಖುಷಿಯನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳಲು ಈ ಜೋಡಿ ನಿರ್ಧರಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹೌದು, ದೇಶಾದ್ಯಂತ ಇರುವ ಅಭಿಮಾನಿಗಳಿಗೆ ಸಿಹಿ ಹಂಚಿ, ವಿವಿಧ ಸ್ಥಳಗಳಲ್ಲಿ ಅನ್ನದಾನ ಮಾಡಲು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ  ಮುಂದಾಗಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಈ ದೇಶದ ಸುಂದರವಾದ ಜನರೇ.. ನಮ್ಮ ಈ ಪ್ರೀತಿ ಮತ್ತು ಪಯಣದಲ್ಲಿ ನೀವು ಯಾವಾಗಲೂ ಜೊತೆಯಾಗಿದ್ದೀರಿ. ನಿಮ್ಮೆಲ್ಲರ ಜೊತೆ ನಮ್ಮ ಮದುವೆಯನ್ನು ಸಂಭ್ರಮಿಸುವುದು ನಮಗೆ ಖುಷಿ ನೀಡುತ್ತದೆ. ಸಿಹಿ ಮತ್ತು ಆಹಾರದ ಜೊತೆ ಭಾರತ ಎಲ್ಲವನ್ನೂ ಸಂಭ್ರಮಿಸುತ್ತದೆ. ಹಾಗಾಗಿ ಮಾರ್ಚ್ 1ರಂದು ನಾವು ಮಿಠಾಯಿ ತುಂಬಿದ ಟ್ರಕ್​ಗಳನ್ನು ದೇಶಾದ್ಯಂತ ಕಳಿಸುತ್ತಿದ್ದೇನೆ’ ಎಂದು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.

‘ದೇಶದ ವಿವಿಧ ದೇವಸ್ಥಾನದಲ್ಲಿ ನಾವು ಅನ್ನದಾನ ಮಾಡಲು ದೇಣಿಗೆ ನೀಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಬಯಸುತ್ತಿದ್ದೇನೆ’ ಎಂದು ಪೋಸ್ಟ್ ಮಾಡಿರುವ ಅವರು, ಯಾವ ದೇವಸ್ಥಾನಗಳಲ್ಲಿ ಅನ್ನದಾನ ನಡೆಯಲಿದೆ ಎಂಬ ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರಿನ ಶಿವೋಹಂ ದೇವಸ್ಥಾನ, ಕೊಡಗಿನ ಪಾದಿ ಇಗ್ಗುತ್ತಪ್ಪ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ಬೆಂಗಳೂರಿನ ರಾಧಾಕೃಷ್ಣ ದೇವಸ್ಥಾನದಲ್ಲಿ ಅನ್ನದಾನ ಮಾಡಲಾಗುವುದು.

ಕರ್ನಾಟಕದ ಮೈಸೂರು, ಕೊಡಗು ಮತ್ತು ಬೆಂಗಳೂರಿನಲ್ಲಿ ಸಿಹಿ ವಿತರಣೆ ಮಾಡಲಾಗುವುದು. ಅದೇ ರೀತಿ ಬೇರೆ ಬೇರೆ ರಾಜ್ಯಗಳ ಕೆಲವು ದೇವಸ್ಥಾನಗಳಲ್ಲಿ ಅನ್ನದಾನ ಮತ್ತು ಪ್ರಮುಖ ನಗರಗಳಲ್ಲಿ ಸಿಹಿ ಹಂಚಲಾಗುವುದು ಎಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮಾಹಿತಿ ನೀಡಿದ್ದಾರೆ. ಈ ಜೋಡಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಪ್ರೀತಿ ಚಿಗುರಿತು. ಅದನ್ನು ಅವರು ಗುಟ್ಟಾಗಿ ಇಟ್ಟಿದ್ದರು. ಆದರೂ ಗಾಸಿಪ್ ಹಬ್ಬಿತ್ತು. ಈಗ ಅವರ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿದೆ. ಜೀವನದ ಹೊಸ ಅಧ್ಯಾಯವನ್ನು ಅವರು ಆರಂಭಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles