ನ್ಯೂಸ್ ನಾಟೌಟ್: ಕಲಿಕೆಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿರುವ ಸುಳ್ಯದ ಸ್ನೇಹ ಶಾಲೆಯಲ್ಲಿ ಮ್ಯಾನ್ಮಾರ್ ನಿಂದ ವರ್ಚುವಲ್ ವಿಚಾರ ಸಂಕಿರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಅಂತಾರಾಷ್ಟ್ರೀಯ ಕಲಿಕಾ ಸಹಯೋಗದ ಅಂಗವಾಗಿ ಮ್ಯಾನ್ಮಾರ್ ನ ಗ್ರಾಮೀಣ ಅಭಿವೃದ್ದಿ ಸಂಯೋಜಕರಾದ ಎಲಿಜಬೆತ್ ಚಿನ್ ಪಾರ್ ಅವರು ವಿಚಾರ ಮಂಡನೆಯನ್ನು ಜಾಲತಾಣದ ವೇದಿಕೆಯಲ್ಲಿ ಮಾಡಿದರು. ನೈಸರ್ಗಿಕ ವಿಕೋಪಗಳಲ್ಲದೆ ಸಾಂಪ್ರದಾಯಿಕ ಸಾವಯವ ಕೃಷಿಗೆ ಎದುರಾಗಿರುವ ಆತಂಕಗಳ ಬಗ್ಗೆ ಅವರು ವಿದ್ಯಾರ್ಥಿಗಳ ಗಮನ ಸೆಳೆದರು. ಶ್ರೀರಂಗ ಪಟ್ಟಣದ ಅಭಿವೃದ್ಧಿ ತಜ್ಞ ಶ್ರೀ ಶಶಿಧರ್ ಸಮನ್ವಯಕಾರರಾಗಿ ಸಹಕರಿಸಿದರು. ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸರಣಿಯಲ್ಲಿ ಸ್ನೇಹ ಶಾಲೆಯಲ್ಲಿ ನಡೆಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಎಕ್ಸ್ಪೋಶರ್ ದೃಷ್ಟಿಯಿಂದ ಉಪಯುಕ್ತವಾಗಿವೆ ಎಂಬುದಾಗಿ ಹೇಳಿದ ಸಂಸ್ಥೆಯ ಆಡಳಿತಾಧಿಕಾರಿ ಅಕ್ಷರ ದಾಮ್ಲೆ ಧನ್ಯವಾದ ಸಮರ್ಪಿಸಿದರು.













