21.6 C
Sullia
Saturday, March 7, 2026

ಸಂಪಾಜೆ: ಗಾಳಿ ಮಳೆಗೆ ಭಾರೀ ಅನಾಹುತ ಸಂಭವಿಸಿದರೂ ಇಣುಕಿ ನೋಡದ ಮೇಲಾಧಿಕಾರಿಗಳು..!, ಮಾನವೀಯ ನೆಲೆಯಲ್ಲಿ ಭೇಟಿ ಕೊಡುವಂತೆ ಗ್ರಾಮಸ್ಥರ ಒತ್ತಾಯ

ನ್ಯೂಸ್ ನಾಟೌಟ್: ಸಂಪಾಜೆ ಭಾಗದ ಗೂನಡ್ಕ ಸೇರಿದಂತೆ ಹಲವು ಭಾಗದಲ್ಲಿ ಗಾಳಿ ಮಳೆಯ ಆರ್ಭಟಕ್ಕೆ ಸಂಪೂರ್ಣ ಹಾನಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಗೂನಡ್ಕದ ಬಡ ವಿಧವೆ ಮಹಿಳೆ ಚಂದ್ರಾವತಿಯವರ ಮನೆಗೆ ಮರ ಬಿದ್ದು ಸಂಪೂರ್ಣ ಬದುಕು ಅತಂತ್ರವಾಗಿದೆ. ಈ ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಸ್ಥಳೀಯ ಆಡಳಿತದ ಪಿಡಿಒ ಸರಿತಾ ಓಲ್ಗಾ ಡಿಸೋಜಾ ಹಾಗೂ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಹೊರತು ಪಡಿಸಿ ಬೇರೆ ಯಾವ ಅಧಿಕಾರಿಗಳು ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಸಮಸ್ಯೆಗೆ ತುತ್ತಾಗಿರುವ ಬಡ ಕುಟುಂಬಕ್ಕೆ ತಾತ್ಕಾಲಿಕ ವ್ಯವಸ್ಥೆಯನ್ನು ಸ್ಥಳೀಯರ ಸಹಾಯದಿಂದ ಮಾಡಲಾಗಿದೆ. ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಮಾನವೀಯ ನೆಲೆಯಲ್ಲಿ ಸಹಾಯ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles