ನ್ಯೂಸ್ ನಾಟೌಟ್: ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ (ರಿ) ಸುಳ್ಯ ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ರಂಗಮನೆಯ ಆಡಿಟೋರಿಯಂನಲ್ಲಿ ಇತ್ತೀಚೆಗೆ ಆಯೋಜಿಸಿದ “ರಂಗ ಸಂಭ್ರಮ 2026” ಸಾಂಸ್ಕೃತಿಕ ಉತ್ಸವದಲ್ಲಿ ಸೋನಾ ಅಡ್ಕಾರ್ ಅವರಿಗೆ ಯೋಗ ಸಾಧನೆಗಾಗಿ ರಂಗಮನೆ ಪ್ರತಿಭಾ ಗೌರವ 2026 ನೀಡಿ ಗೌರವಿಸಲಾಗಿದೆ.

ಅಷ್ಟೇ ಅಲ್ಲ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಶ್ರೀ ಕಲ್ಲೇಶ್ವರ ಸ್ವಾಮಿ ಸನ್ನಿಧಿ-ಕೆಗ್ಗೆರೆಯಲ್ಲಿ ಇತ್ತೀಚೆಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಗ್ರನರಸಿಂಹ ಯೋಗ ನೃತ್ಯ ರೂಪಕದಲ್ಲಿ ಸೋನಾ ಅಡ್ಕಾರ್ ಮಿಂಚಿದ್ದಾರೆ. ಮಂಜು ಅಡಗೂರು, ನವೀನ್ ಕಡೂರ್ ಮತ್ತು ಇತರ ಹಲವಾರು ಗಣ್ಯರ ಸಮ್ಮುಖದಲ್ಲಿ ಸೋನಾ ಅಡ್ಕಾರ್ ಗೆ “ಯೋಗ ಕಣ್ಮಣಿ” ಬಿರುದು ಕೊಟ್ಟು ಸನ್ಮಾನಿಸಲಾಯಿತು. ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ಅವರ ಪುತ್ರಿ.













