ನ್ಯೂಸ್ ನಾಟೌಟ್ : ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devarakonda) ವೈವಾಹಿಕ ಜೀವನಕ್ಕೆ (Marriage) ಕಾಲಿಡಲು ಸಜ್ಜಾಗಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಆಹ್ವಾನ ಪತ್ರಿಕೆ ಇದೀಗ ಕನ್ನಡದ ಸ್ಟಾರ್ ನಟರಿಗೂ ನೀಡಲಾಗಿದೆ. ನಾಳೆ (ಫೆಬ್ರವರಿ 26) ನಡೆಯಲಿರುವ ಮದುವೆ ಮತ್ತು ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್‌ಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ.
ಶಿವರಾಜ್ ಕುಮಾರ್ , ಕಿಚ್ಚ ಸುದೀಪ್ , ಯಶ್, ಪುನೀತ್ ರಾಜ್ ಕುಮಾರ್ ಫ್ಯಾಮಿಲಿ, ರವಿಚಂದ್ರನ್ , ಧ್ರುವ ಸರ್ಜಾ, ಗಣೇಶ್ , ನಿರ್ದೇಶಕ ಎ.ಹರ್ಶ, ನಂದ ಕಿಶೋರ್ , ಸಿಂಪಲ್ ಸುನಿ, ಅಶಿಕಾ ರಂಗನಾಥ್ ಗೆ ಮಾತ್ರ ಆಹ್ವಾನ ಪತ್ರಿಕೆ ನೀಡಲಾಗಿದೆ.
ಒಟ್ಟು 11 ಮಂದಿಗೆ ಮಾತ್ರ ಆರತಕ್ಷತೆಯ ಆಮಂತ್ರಣ ಪತ್ರಿಕೆ ತಲುಪಿಸಲಾಗಿದೆ. ರಶ್ಮಿಕಾ ತಾನೇ ಮೆಸೇಜ್ ಮಾಡಿ ವೈಯಕ್ತಿಕವಾಗಿ ಆಹ್ವಾನಿಸಿದ್ದಾರೆ. ಆದರೆ ಈ ಆಹ್ವಾನ ಪಟ್ಟಿಯಲ್ಲಿ ಒಂದು ವಿಷಯ ಗಮನ ಸೆಳೆದಿದೆ. ಮತ್ತು ಇದು ಭಾರೀ ಚರ್ಚೆಗೂ ಕಾರಣವಾಗಿದೆ.
ರಶ್ಮಿಕಾಗೆ ಮೊದಲ ಅವಕಾಶ ಕೊಟ್ಟ ಶೆಟ್ರ ಬಳಗ ಅಥವಾ ಆ ತಂಡದ ಮುಖ್ಯಸ್ಥರು ಈ ಪಟ್ಟಿಯಲ್ಲಿ ಇಲ್ಲ. ರಶ್ಮಿಕಾ ಮೊದಲು ‘ಕಿರಿಕ್ ಪಾರ್ಟಿ’ಯಲ್ಲಿ ನಟಿಸಿದ್ದು, ಆ ಚಿತ್ರದಲ್ಲಿ ಶೆಟ್ರು ತಂಡದವರು ದೊಡ್ಡ ಪಾತ್ರ ವಹಿಸಿದ್ದರು. ಆದರೆ ಈಗ ರಶ್ಮಿಕಾ ದೊಡ್ಡ ಸ್ಟಾರ್ ಆಗಿರುವಾಗ ಅವರಿಗೆ ಆಹ್ವಾನ ತಲುಪಿಸದಿದ್ದುದು ಗಮನಾರ್ಹವಾಗಿದೆ.
ಈ ವಿಷಯದ ಬಗ್ಗೆ ಚರ್ಚೆ ಆರಂಭವಾಗಿದೆ. ಕೆಲವರು ‘ರಶ್ಮಿಕಾ ತನ್ನ ಮೊದಲ ಅವಕಾಶ ಕೊಟ್ಟವರನ್ನು ಮರೆತ್ರಾ?’ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಮದುವೆಯಲ್ಲಿ ಆಯ್ಕೆಮಾಡುವುದು ತನ್ನ ಇಷ್ಟದವರನ್ನು, ಇದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸುತ್ತಿದ್ದಾರೆ. ರಶ್ಮಿಕಾ ಈಗ ದಕ್ಷಿಣ ಭಾರತದ ದೊಡ್ಡ ಸ್ಟಾರ್ ಆಗಿರುವುದರಿಂದ ಆಹ್ವಾನ ಪಟ್ಟಿಯಲ್ಲಿ ಕನ್ನಡದ ಹಲವು ದೊಡ್ಡ ಹೆಸರುಗಳನ್ನು ಇರಿಸಿರುವುದು ಸಂತೋಷದ ವಿಷಯ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.













