21.6 C
Sullia
Sunday, March 8, 2026

“ಬಿಜೆಪಿ ಪಕ್ಷ ನನ್ನನ್ನು ಗುರುತಿಸದಿರುವುದು ಅತೀವ ನೋವು ತಂದಿದೆ, ನಾನೆಂದೂ ಲಾಭಿ ಮಾಡಲ್ಲ”, ಸಹಕಾರ ಸಂಘದ ಅಧ್ಯಕ್ಷತೆ ತಪ್ಪಿದ ಬೆನ್ನಲ್ಲೇ ರಾಜೇಶ್ ಭಟ್ ನೆಕ್ಕಿಲ ತೀವ್ರ ಅಸಮಾಧಾನ

ನ್ಯೂಸ್ ನಾಟೌಟ್: ಉಬರಡ್ಕ ಮಿತ್ತೂರು ಸಹಕಾರ ಸಂಘದಲ್ಲಿ ಅಧ್ಯಕ್ಷ ಸ್ಥಾನ ಸಿಗದಿರುವ ಬಗ್ಗೆ ರಾಜೇಶ್ ಭಟ್ ನೆಕ್ಕಿಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಬಗ್ಗೆ ಮಾತನಾಡಿರುವ ರಾಜೇಶ್ ಭಟ್ ನೆಕ್ಕಿಲ ಅವರು, ‘ನಾನು ಉಬರಡ್ಕ ಮಿತ್ತೂರು ಸಹಕಾರ ಸಂಘದಲ್ಲಿ ನಾಲ್ಕು ಬಾರಿ ನಿರ್ದೇಶಕ, ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಧ್ಯಕ್ಷತೆ ವಿಚಾರದಲ್ಲಿ ಬಿಜೆಪಿ ಪಕ್ಷ ನನ್ನನ್ನು ಗುರುತಿಸದಿರುವುದು ಮನಸ್ಸಿಗೆ ತುಂಬಾ ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷತೆ ಚುನಾವಣೆಯಿಂದ ದೂರ ನಿಂತಿದ್ದೇನೆ’ ಎಂದು ತಿಳಿಸಿದ್ದಾರೆ.

‘ನಾನು ಸಹಕಾರ ಸಂಘದಲ್ಲಿ ಯಾವುದೇ ಸ್ಥಾನವನ್ನು ಯಾರೊಂದಿಗೂ ಬಾಯಿಬಿಟ್ಟು ಕೇಳಿಲ್ಲ. ಇದುವರೆಗೆ ಜಾತಿ ಧರ್ಮ ಮೀರಿ ನನಗೆ ಮತ ಹಾಕಿದ ಮತದಾರರ ಮನಃಸ್ಥಿತಿಗೆ ವಿರೋಧವಾಗಿ ಹೋಗುವುದು ನನಗೆ ಇಷ್ಟ ಇರಲಿಲ್ಲ. ಹಾಗಾಗಿ ನಾನು ಅಲ್ಲಿಗೆ ಹೋಗಿರಲಿಲ್ಲ. ನಮ್ಮ ಪಕ್ಷದಲ್ಲಿ ಕೆಲವರು ನಮ್ಮನ್ನು ತುಳಿಯುವಂತಹ ಪ್ರಯತ್ನ ಮಾಡಿದ್ದಾರೆ ಎಂದು ರಾಜೇಶ್ ಭಟ್ ನೆಕ್ಕಿಲ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Latest Articles