ನ್ಯೂಸ್ ನಾಟೌಟ್: ಕಳೆದ ಹದಿನೈದು ದಿನಗಳಿಗಿಂತಲೂ ಹೆಚ್ಚಿನ ಸಮಯದಿಂದ ಸುಳ್ಯದ ಜ್ಯೋತಿ ಸರ್ಕಲ್ ಬಳಿ ಹ್ಯುಂಡೈ ಐ-10 ಕಾರ್ ವೊಂದು ನಿಂತಲ್ಲೇ ನಿಂತಿದೆ. ಇದರ ವಾರಿಸುದಾರರು ಯಾರು ಇಲ್ಲ ಎನಿಸುತ್ತಿದೆ. ಇಷ್ಟು ಸಮಯಗಳಿಂದ ಈ ಕಾರು ಇಲ್ಲಿ ಏಕೆ ನಿಂತಿದೆ..? ಇದನ್ನು ಎಲ್ಲಿಂದಾದರೂ ಕದ್ದು ತೆಗೆದುಕೊಂಡು ಬರಲಾಗಿದೆಯೋ ಅನ್ನುವಂತಹ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ವಾರಿಸುದಾರರು ಇಲ್ಲದಿರುವ ಈ ಕಾರಿನ ಬಗ್ಗೆ ಪೊಲೀಸರು ಗಮನ ಹರಿಸಬೇಕಿದೆ.













