21.6 C
Sullia
Sunday, March 8, 2026

ಕಾರಿನಲ್ಲಿ ನಿದ್ರೆಗೆ ಜಾರಿದ್ದ ಕಂದಮ್ಮ: ಕ್ಯಾಬ್’ನಲ್ಲೇ ಬಿಟ್ಟು ಹೋದ ಪೋಷಕರು! ಮುಂದೇನಾಯ್ತು?

ನ್ಯೂಸ್ ನಾಟೌಟ್ : ನಿದ್ರೆಗೆ ಜಾರಿದ್ದ ಮಗುವನ್ನು ಪೋಷಕರು ಕ್ಯಾಬ್ ನಲ್ಲೇ ಮರೆತುಹೋದ ಘಟನೆಯೊಂದು ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಪೊನ್ನಪ್ಪ ಲೇಔಟ್‌ನಲ್ಲಿರುವ ಅಪಾರ್ಟ್ಮೆಂಟ್ ನಿವಾಸಿಗಳಾಗಿರುವ ಮಗುವಿನ ಪೋಷಕರು ಇಸ್ಕಾನ್ ದೇವಾಲಯಕ್ಕೆ ತೆರಳಿದ್ದಾರೆ. ಮರಳಿ ಕ್ಯಾಬ್ ನಲ್ಲಿ ಬಂದಿದ್ದು, ಈ ವೇಳೆ ಕಾರಿನಲ್ಲಿ ನಾಲ್ಕು ವರ್ಷದ ಮಗು ಮಲಗಿದೆ. ಕಾರಿನಲ್ಲಿ ಇಳಿದು ಹೋಗುವಾಗ ಮಗುವನ್ನು ಪೋಷಕರು ಮರೆತಿದ್ದಾರೆ. ಈ ನಡುವೆ ಕ್ಯಾಬ್ ಚಾಲಕ ಕೂಡ ಈ ಬಗ್ಗೆ ಗಮನ ಕೊಟ್ಟಿಲ್ಲ.

ಮನೆಗೆ ತೆರಳಿದ ಸ್ವಲ್ಪ ಸಮಯದ ಬಳಿಕ ಮಗು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಮಗು ಕ್ಯಾಬ್ ನಲ್ಲೇ ಮಲಗಿರುವುದನ್ನು ನೆನಪಿಸಿಕೊಂಡ ತಾಯಿ, ಕ್ಯಾಬ್ ಚಾಲಕನಿಗೆ ಕರೆ ಮಾಡಿದ್ದಾರೆ. ಆದರೆ, ಚಾಲಕ ಸಂಪರ್ಕಕ್ಕೆ ಸಿಕ್ಕಿಲ್ಲ.

ಬಳಿಕ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದು, 2 ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಂತ್ರಜ್ಞಾನ ಬಳಸಿ ಕ್ಯಾಬ್ ಚಾಲಕನನ್ನು ಪತ್ತೆ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles