ನ್ಯೂಸ್ ನಾಟೌಟ್ :ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಆಶ್ರಯದಲ್ಲಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಕಾಲೇಜಿನ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣವು ಕೆ.ವಿ.ಜಿ shashtyabdha ರಂಗ ಮಂದಿರ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ 24-02-2026 ರಂದು ಮಂಗಳವಾರ ನಡೆಯಲಿದೆ.
ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ.ಒಎಲ್.ಇ(ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಅಕ್ಷಯ್ ಕೆ.ಸಿ. ಇವರು ಭಾಗವಹಿಸಲಿದ್ದಾರೆ. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರು,. ಡಾ. ರುದ್ರಕುಮಾರ್ ಎಂ ಎಂ, ನೆಹರೂ ಮೆಮೋರಿಯಲ್ ಪಿ.ಯು ಕಾಲೇಜಿನ ಪ್ರಾಂಶುಪಾಲರು ಮಿಥಾಲಿ ರೈ ಪಿ., ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಎನ್.ಎಂ.ಸಿ. ಸುಳ್ಯ ಅಧ್ಯಕ್ಷರು ಕೆ.ಟಿ. ವಿಶ್ವನಾಥ ಇವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಇವರು ವಹಿಸಲಿದ್ದಾರೆ.
ಪ್ರಥಮ ಅಧಿವೇಶನದ ಭಾಷಾ ವಿಚಾರ ಸಂಕಿರಣದಲ್ಲಿ “ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸವಾಲುಗಳು” ಎಂಬ ವಿಷಯದ ಬಗ್ಗೆ ಡಾ. ಧನಂಜಯ ಕುಂಬ್ಳೆ ಹಾಗೂ “ಜಾಗತೀಕರಣ ಮತ್ತು ಸಾಂಸ್ಕೃತಿಕ ಪಲ್ಲಟಗಳು” ಎಂಬ ವಿಷಯದ ಬಗ್ಗೆ ಡಾ. ನರೇಂದ್ರ ರೈ ದೇರ್ಲ ಇವರು ಪ್ರಬಂಧ ಮಂಡಿಸಲಿದ್ದಾರೆ. ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರು ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ವಹಿಸಿ ಮಾತನಾಡಲಿದ್ದಾರೆ.
ಎಂಬ ದ್ವಿತೀಯ ಅಧಿವೇಶನದಲ್ಲಿ ಅರೆಬಾಷೆ ವಿಚಾರ ಸಂಕಿರಣ ನಡೆಯಲಿದೆ. “ಅರೆಭಾಷೆನ ಅನನ್ಯತೆಗೆ” ಎಂಬ ವಿಷಯದ ಬಗ್ಗೆ ಶ್ರೀ. ಕೆ.ಆರ್. ಗಂಗಾಧರ ಹಾಗೂ ‘ಅರೆಭಾಷೆಯ ಪ್ರಾದೇಶಿಕ ವಿಭಿನ್ನತೆಗ’ ವಿಷಯದ ಕುರಿತು ಡಾ. ಪುರುಷೋತ್ತಮ ಕರಂಗಲ್ಲು ಇವರು ಮಾತನಾಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕರು ಹಾಗೂ ಸಾಹಿತಿಗಳಾದ ಪ್ರೊ. ಕೆ.ಇ. ರಾಧಾಕೃಷ್ಣ ಬೆಂಗಳೂರು ಇವರು ವಹಿಸಲಿದ್ದಾರೆ.
ಮಧ್ಯಾಹ್ನ ಭೋಜನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಭೋಜನ ನಂತರದ ಅವಧಿಯಲ್ಲಿ ಅರೆಭಾಷೆ ಸಂಸ್ಕೃತಿ ವಿಚಾರ ಸಂಕಿರಣ ನಡೆಯಲಿದೆ. “ಅರೆಭಾಷೆನ ಮೊದ್ದೆ ಪದ್ಧತಿಗಲ್ಲಿ ಬದಲಾವಣೆಗ” ಎಂಬ ವಿಷಯದ ಕುರಿತು ಶ್ರೀ ದೊಡ್ಡಣ ಬರೆಮೇಲು, “ಸಿದ್ದವೇಶ-ಅರೆಭಾಷಿಕರ ಜಾನಪದ ನೃತ್ಯ,” ಎಂಬ ವಿಷಯದ ಬಗ್ಗೆ ಶ್ರೀ ಜಯಪ್ರಕಾಶ ಕುಕ್ಕೆಟ್ಟಿ, “ಅರೆಭಾಷಿಕರ
ದೈವರಾಧಾನೆ” ಬಗ್ಗೆ ಡಾ. ಕರುಣಾಕರ ನಿಡಿಂಜಿ ಹಾಗೂ “ಕೊಡಗಿನ ಅರೆಭಾಷಿಕರ ಹಬ್ಬ ಹರಿದಿನ” ಗಳ ಬಗ್ಗೆ ಡಾ. ದಯಾನಂದ ಕೂಡಕಂಡಿ ಇವರು ಉಪನ್ಯಾಸ ನೀಡಲಿದ್ದಾರೆ. ಗೋಷ್ಟಿಯ ಅಧ್ಯಕ್ಷತೆಯನ್ನು ಖ್ಯಾತ ವಾಗ್ನಿಗಳಾದ ಶ್ರೀ ಪಟ್ಟಡ ಶಿವಕುಮಾರ್ ಇವರು ವಹಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಸಾಹಿತಿಗಳು, ಚಿಂತಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪದವಿ ಕಾಲೇಜಿನ ಉಪಾನ್ಯಾಸಕರಿಗೆ ಓಓಡಿ ಸೌಲಭ್ಯವನ್ನು ನೀಡಲಾಗಿದೆ. ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಚಂದ್ರಶೇಖರ ಪೇರಾಲ್ ಕೆಲಸ ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.













