21.6 C
Sullia
Sunday, March 8, 2026

ಪೊಲೀಸರ ಮುಂದೆ ತನ್ನ ಲವ್ ಕಹಾನಿ ಹೇಳಿದ ಪ್ರಿಯಾಂಕಾ! ಬೇಡವಾಗಿದ್ದ ಗಂಡ, ಬೇಕಿದ್ದ ಡೇವಿಡ್ ಕಥೆ ಕಟ್ಟಿದ್ಯಾಕೆ?

ನ್ಯೂಸ್ ನಾಟೌಟ್ : 30 ಲಕ್ಷ ರು. ಮೌಲ್ಯದ ಒಡವೆ ಧರಿಸಿ ನಾಪತ್ತೆಯಾಗಿದ್ದ ಕುಣಿಗಲ್‌ ತಾಲೂಕಿನ ಗೃಹಿಣಿ ಪ್ರಿಯಾಂಕಾ, ತಾನು ಕೊಲೆಯಾಗಿರುವುದಾಗಿ ಬಿಂಬಿಸಿ ಪ್ರಿಯಕರನ ಜತೆ ಮಧ್ಯಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದಳು!


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಹಾಸನದ ಬೇಲೂರಿನಲ್ಲಿ ನಾಪತ್ತೆಯಾದ ಪ್ರಿಯಾಂಕಾ ಕುಣಿಗಲ್‌ನಲ್ಲಿ ಪ್ರಿಯಕರ ಡೇವಿಡ್‌ ಮನೆಯಲ್ಲಿ ಪತ್ತೆಯಾಗಿದ್ದಳು. ವಿಚಾರಣೆ ವೇಳೆ, ತನಗೆ ಪತಿ ಜತೆ ಬಾಳಲು ಇಷ್ಟವಿರಲಿಲ್ಲ. ಡೇವಿಡ್‌ ಜತೆ ಓಡಿಹೋಗಲು ನಾಟಕವಾಡಿದೆ ಎಂದು ಹೇಳಿದ್ದಾಳೆ.

ಕುಣಿಗಲ್‌ನ ಖಾಸಗಿ ಕಾರ್ಖಾನೆಯಲ್ಲಿ ಸೂಪರ್‌ವೈಸರ್‌ ಆಗಿರುವ ಡೇವಿಡ್‌ ಮೂಲತಃ ಪಶ್ಚಿಮ ಬಂಗಾಳದವನು. ಅದೇ ಕಾರ್ಖಾನೆಗೆ ಪ್ರಿಯಾಂಕಾ ಕೂಡ ಕೆಲಸಕ್ಕೆ ಹೋಗುತ್ತಿದ್ದಳು. ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು. ಶೀಘ್ರದಲ್ಲೇ ಡೇವಿಡ್‌ ಮಧ್ಯಪ್ರದೇಶಕ್ಕೆ ವರ್ಗಾವಣೆಯಾಗುತ್ತಿದ್ದ. ಹೀಗಾಗಿ ಆತನ ಜತೆ ಅಲ್ಲಿಗೆ ಹೋಗಲು ತಾನು ಕೊ*ಲೆಯಾಗಿರುವ ನಾಟಕವಾಡಿದ್ದಳು ಎಂದು ತಿಳಿದು ಬಂದಿದೆ.

ವಿವಾಹದ ನೆಪದಲ್ಲಿ ಬೇಲೂರಿಗೆ ಬಂದಿದ್ದ ಆಕೆ ಕೆರೆಯೊಂದರ ಬಳಿ ಒಳಉಡುಪು, ಬಟ್ಟೆ, ವ್ಯಾನಿಟಿ ಬ್ಯಾಗ್‌ ಎಸೆದು ಕೊ*ಲೆಯಾಗಿರುವ ಕತೆ ಕಟ್ಟಿ, ಫೋನ್‌ ಸ್ವಿಚ್‌ ಆಫ್‌ ಮಾಡಿ ಕುಣಿಗಲ್‌ಗೆ ಬಂದಿದ್ದಳು. ಆಕೆಯನ್ನು ಕೊ*ಲೆ ಮಾಡಿ ಕೆರೆಗೆ ಎಸೆದಿರಬಹುದು ಎಂದು ಪೊಲೀಸರು ಈಶ್ವರ ಮಲ್ಪೆ ತಂಡವನ್ನು ಕರೆಸಿ ಜಾಲಾಡಿದರೂ ಶವ ಸಿಕ್ಕಿರಲಿಲ್ಲ. ಈ ನಡುವೆ ಆಕೆಯ ಕರೆ ವಿವರ ಪರಿಶೀಲಿಸಿದಾಗ, ಪ್ರಿಯಾಂಕಾ ಡೇವಿಡ್‌ ಜತೆ ನಿರಂತರ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಹೀಗಾಗಿ ಸಿಕ್ಕಿಬಿದ್ದಿದ್ದಾಳೆ.

ಬೇಲೂರು ತಾಲೂಕಿನ ಪ್ರಿಯಾಂಕಾಗೆ 11 ವರ್ಷದ ಹಿಂದೆ ಕುಣಿಗಲ್ ನಿವಾಸಿ ರುದ್ರೇಶ್ ಎಂಬವರೊಂದಿಗೆ ಮದುವೆಯಾಗಿತ್ತು. ಇತ್ತ ಡೇವಿಡ್‌ಗೂ ಮದುವೆಯಯಾಗಿತ್ತು. ಡೇವಿಡ್ ಮನೆಯಲ್ಲಿದ್ದ ಪ್ರಿಯಾಂಕಾಳನ್ನು ಪೊಲೀಸರು ಬಂಧಿಸಿದ್ದರು.

Related Articles

LEAVE A REPLY

Please enter your comment!
Please enter your name here

Latest Articles