21.6 C
Sullia
Sunday, March 8, 2026

ಅರಂತೋಡು: ಪೆಟ್ರೋಲ್ ಹಾಕಿಸಿಕೊಂಡು ದುಡ್ಡು ಕೊಡದೆ ಕಾರು ಚಲಾಯಿಸಿಕೊಂಡು ಓಡಿದ ಮಗ..! ಬಂಕ್ ಗೆ ಪೆಟ್ರೋಲ್ ಬಿಲ್ ಕಟ್ಟಿ ಮಾನ ಕಾಪಾಡಿಕೊಂಡ ಅಮ್ಮ..!

ನ್ಯೂಸ್ ನಾಟೌಟ್: ಅರಂತೋಡು ನಯಾರ ಪೆಟ್ರೋಲ್ ಬಂಕ್ ನಲ್ಲಿ ಎರಡು ದಿನಗಳ ಹಿಂದೆ ಕೇರಳ ರಿಜಿಸ್ಟ್ರೇಶನ್ ಹೊಂದಿದ ಕಾರಿನ ಚಾಲಕನೊಬ್ಬ ಪೆಟ್ರೋಲ್ ಹಾಕಿಸಿಕೊಂಡು ಬಿಲ್ ಪಾವತಿಸದೆ ವೇಗವಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಘಟನೆಗೆ ಸಂಬಂಧಪಟ್ಟಂತೆ ದೂರು ಕೂಡ ದಾಖಲಾಗಿತ್ತು. ಮಗ ಅರಂತೋಡಿನಿಂದ ಪರಾರಿಯಾಗಿದ್ದ, ಜಾಲ್ಸೂರು ಬಳಿ ಕಾರು ತಡೆದು ನಿಲ್ಲಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಇದೀಗ ಮಗನ ಅವಾಂತರದಿಂದ ಅಮ್ಮ ತಲೆತಗ್ಗಿಸುವಂತಾಗಿದೆ. ಕಾರಿನ ನಂಬರ್ ಪರಿಶೀಲಿಸಿ ಈ ಆಧಾರದಲ್ಲಿ ಕಾರಿನ ಮಾಲೀಕರಿಗೆ ಕರೆ ಮಾಡಿದಾಗ ಯುವಕನ ತಾಯಿ ಫೋನ್ ತೆಗೆದಿದ್ದಾರೆ. ವಿಷಯ ತಿಳಿದ ಬಳಿಕ ದೂರು ದಾಖಲಿಸಬೇಡಿ ಆ ಬಿಲ್ ನಾನು ಪಾವತಿಸುತ್ತೇನೆಂದು ತಿಳಿಸಿ 1 ಸಾವಿರ ರೂ. ವನ್ನು ಬಂಕ್ ಗೆ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಪ್ರಕರಣವು ಸುಖಾಂತ್ಯ ಕಂಡಿದೆ.

Related Articles

LEAVE A REPLY

Please enter your comment!
Please enter your name here

Latest Articles