ನ್ಯೂಸ್ ನಾಟೌಟ್: ಮಂಡೆಕೋಲಿನ ಪೇರಾಲು ಭಾಗದ ಸಂಕೇಶದಲ್ಲಿ ನೀರಿನ ಬಿಲ್ ಕಟ್ಟಿಲ್ಲವೆಂದು ನೀರು ನಿಲ್ಲಿಸಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಸುಮಾರು 30ಕ್ಕೂ ಅಧಿಕ ಮನೆಗಳಿದ್ದ ಕಾಲೋನಿಗೆ ನೀರು ನಿಲ್ಲಿಸಲಾಗಿತ್ತು. ಈ ಬಗ್ಗೆ ನ್ಯೂಸ್ ನಾಟೌಟ್ ವೆಬ್ ಸೈಟ್ ನಲ್ಲಿ ವರದಿ ಪ್ರಕಟಗೊಂಡ ಕೇವಲ 24 ಗಂಟೆಗಳಲ್ಲಿ ಸ್ಥಳೀಯಾಡಳಿತ ತುರ್ತು ಕ್ರಮ ಕೈಗೊಂಡಿದ್ದು ನೀರು ಹರಿಸಲಾಗಿದೆ. ಇದೇ ವೇಳೆ ಗ್ರಾಮಸ್ಥರು ನ್ಯೂಸ್ ನಾಟೌಟ್ ಮಾಧ್ಯಮಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.













