21.6 C
Sullia
Sunday, March 8, 2026

ಸಿಜೆ ರಾಯ್ ಬೆನ್ನಲ್ಲೇ ಕೇರಳದಲ್ಲಿ ಮತ್ತೊಬ್ಬ ಉದ್ಯಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ; ಹೆಂಡತಿ ಮಕ್ಕಳ ಸ್ಥಿತಿ ಗಂಭೀರ

ನ್ಯೂಸ್ ನಾಟೌಟ್ : ಕಷ್ಟದ ಸಮಯದಲ್ಲಿ ಕೊಟ್ಟ ಹಣವನ್ನು ವಾಪಸ್‌ ಕೊಡದೇ ಇದ್ದಿದ್ದಕ್ಕೆ ಕೊಡಗಿನ ಉದ್ಯಮಿಯೊಬ್ಬರು ಮನನೊಂದು ಕೇರಳದಲ್ಲಿರುವ ಸಾಲ ಪಡೆದಿದ್ದ ವ್ಯಕ್ತಿಯ ಮನೆ ಮುಂದೆ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಂಡತಿ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಪೊನ್ನಂಪೇಟೆಯ ಕುಟ್ಟ ಗ್ರಾಮದ ನಜೀರ್ ಆತ್ಮಹತ್ಯೆಗೆ ಶರಣಾದವರು. ಕೇರಳದ‌ ವಯನಾಡು‌ ಮೂಲದ ಬಾಪು ಎಂಬ ವ್ಯಕ್ತಿಗೆ ನಜೀರ್ ಸಾಲ ಕೊಟ್ಟಿದ್ದರು. ಆದರೆ ಅವರು ವಾಪಸ್‌ ಕೊಡದಿದ್ದಕ್ಕೆ ಮನನೊಂದು ಹೆಂಡತಿ ಮೂವರು ಮಕ್ಕಳೊಂದಿಗೆ ಕಾರಿನಲ್ಲಿ ಕುಳಿತು ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.

ಅಕ್ಕಪಕ್ಕದ ಜನರು ಕಾರಿನಲ್ಲಿದ್ದ ಉದ್ಯಮಿಯ ಪತ್ನಿ ಹಾಗೂ ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳೆಗೆ 22% ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಮೂವರು ಮಕ್ಕಳಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಮಕ್ಕಳಿಗೆ ಮಾನಂತವಾಡಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆಯನ್ನು ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ನಜೀರ್‌ ಫೇಸ್‌ಬುಕ್‌ನಲ್ಲಿ ವೀಡಿಯೋ ಪೋಸ್ಟ್‌ ಮಾಡಿದ್ದು, ಆತ್ಮಹತ್ಯೆಗೆ ಬಾಪು ಕಾರಣ ಎಂದು ಆರೋಪಿಸಿದ್ದಾರೆ. ಈ ಘಟನೆ ಸಂಬಂಧ ಮಾನಂತವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles