ನ್ಯೂಸ್ ನಾಟೌಟ್ :ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಗೆದ್ದಿರುವ ಗಿಲ್ಲಿ ನಟ ಸೆಲೆಬ್ರಿಟಿ ಆಗಿದ್ದಾರೆ. ಚಿನ್ನದ ಅಂಗಡಿ ಉದ್ಘಾಟನೆಯಿಂದ ಹಿಡಿದು ಯಾವ್ಯಾವ ಕಾರ್ಯಕ್ರಮಗಳಿಗೆ ಕರೆಯಲಾಗುತ್ತಿದೆ. ಇದೀಗ ಗಿಲ್ಲಿ, ಚನ್ನರಾಯಪಟ್ಟಣದಲ್ಲಿ ನಡೆದ ರಾಮೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆ ವೇಳೆ ಗಿಲ್ಲಿಯನ್ನು ನೋಡಲು ಸಾಕಷ್ಟು ಜನ ಸೇರಿದ್ದರು. ಈ ವೇಳೆ ಮಾತನಾಡಿದ ಗಿಲ್ಲಿ, ಡೈಲಾಗ್ಗಳನ್ನು ಹೇಳಿ ರಂಜಿಸಿದರು. ಗಿಲ್ಲಿ ಮಾತನಾಡುತ್ತಿದ್ದ ವೇಳೆ ನೆರೆದಿದ್ದ ಯುವಕರು ‘ಕಾವು, ಕಾವು’ ಎಂದು ಜೋರಾಗಿ ಕೂಗುತ್ತಾ ಗಿಲ್ಲಿಯ ಕಾಲೆಳೆಯಲು ಯತ್ನಿಸಿದರು. ಇದಕ್ಕೆ ಗಿಲ್ಲಿ ತನ್ನದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದ ವಿಡಿಯೊ ವೈರಲ್ ಆಗಿದೆ.













