21.6 C
Sullia
Sunday, March 8, 2026

ಬಿಗ್ ಬಾಸ್ ಗಿಲ್ಲಿ ಮಾತ್ರವಲ್ಲ ಗಿಲ್ಲಿ ಅಮ್ಮ ಕೂಡ ಪಾಪ್ಯುಲರ್! ಜನಮನಗೆದ್ದ ಪೇಟಿಂಗ್‌ ಈಗ ಸಖಥ್ ಟ್ರೆಂಡ್!

ನ್ಯೂಸ್ ನಾಟೌಟ್ :


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಗಿಲ್ಲಿ ಹವಾ ಹೇಗಿದೆ ಅನ್ನೋದು ಸಾಕಷ್ಟು ವಿಡಿಯೋಗಳು ಲಭ್ಯವಿದೆ. ಮೊನ್ನೆ ಮೊನ್ನೆ ನಡೆದ ಕನಕೋತ್ಸವದಲ್ಲಿ ಗಿಲ್ಲಿ ಪಾಪ್ಯುಲಾರಿಟಿ ಹೇಗಿದೆ ಅನ್ನೋದಕ್ಕೆ ಸಾಕ್ಷ್ಯ ಹೇಳುತ್ತೆ.

ಗಿಲ್ಲಿ ಸ್ಟೈಲ್‌ನಲ್ಲಿಯೇ ಹೇಳೋದಾದ್ರೆ ಏನ್ರೀ ಏನ್ರೀ ಜನ ಅನ್ನೋ ರೀತಿ ಇತ್ತು. ಗಿಲ್ಲಿ ಬರ್ತಿದ್ರೇ. ಪೊಲೀಸರ ಸರ್ಪಗಾವಲು ಹಾಕ್ಕೊಂಡಿದ್ದರು. ಯಾರು ಹತ್ರ ಸುಳಿಯಲು ಬಿಡಲಿಲ್ಲ. ಅಷ್ಟೇ ಯಾಕೆ ಸ್ಟೇಜ್ ಮೇಲೆ ಕೆಲ ಅಭಿಮಾನಿಗಳು ಏಕಾಏಕಿ ಬಂದು ಬಿಟ್ಟರು. ಅಲ್ಲಿದ್ದ ಆಯೋಜಕರಿಗೆ ದೊಡ್ಡ ತಲೆ ನೋವಾಯ್ತು.

ಇದೊಂದೇ ಅಲ್ಲ, ಗಿಲ್ಲಿ ಇವತ್ತಿಗೂ ಹೊರಗೆ ಬರೋಕೆ ಆಗ್ತಿಲ್ಲ. ಇನ್ನೂ ಅಜ್ಞಾನವಾಸಿಯಾಗಿಯೇ ಇದ್ದಾನೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರೆಸ್ಟ್ ಮಾಡ್ತಿದ್ದಾನೆ. ಹೊರಗೆ ಬಂದ್ರೆ ಜನ ಮುತ್ತಿಗೆ ಹಾಕುವಷ್ಟು ಪಾಪ್ಯುಲಾರಿಟಿ ಗಿಲ್ಲಿಗೆ ಬಂದಿದೆ ಅಂದ್ರೆ ನಿಜಕ್ಕೂ ತಪ್ಪೇ ಆಗೋದಿಲ್ಲ.
ಕೇವಲ ಗಿಲ್ಲಿ ಮಾತ್ರವಲ್ಲ, ಅವರ ಮನೆಯವರು ಕೂಡ ಪಾಪ್ಯುಲರ್ ಆಗಿದ್ದಾರೆ. ಅದಕ್ಕೊಂದು ಎಕ್ಸಾಂಪಲ್ ಇದೊಂದು ಬ್ಯೂಟಿಫುಲ್ ಆರ್ಟ್‌. ಗಿಲ್ಲಿ ಮತ್ತು ಈತನ ತಾಯಿಯ ಪೇಟಿಂಗ್‌ ಈಗ ಸಖಥ್ ಟ್ರೆಂಡ್ ಆಗ್ತಿದೆ. ಬ್ಯಾಕ್‌ಗ್ರೌಂಡ್‌ನಲ್ಲಿ ಜೋಗಿ ಹಾಡು ಬೇರೇ. ಜನರು ಇಷ್ಟಪಡೋಕೆ ಇದಕ್ಕಿಂತ ಬೇರೇನು ಬೇಕು ಹೇಳಿ..

ಗಿಲ್ಲಿಗೇ ಕೇವಲ ಬಿಗ್‌ಬಾಸ್ ಕಪ್ ಗೆದ್ದಿದ್ರೆ, ಒಂದು ವಾರವೋ ಒಂದು ತಿಂಗಳೋ ಹವಾ ಇರ್ತಿತ್ತು. ಆದ್ರೆ, ಗಿಲ್ಲಿ ಗೆದ್ದಿರೋದು ಕೇವಲ ಕಪ್ ಅಲ್ಲ, ಕೋಟ್ಯಂತರ ಕನ್ನಡಿಗರ ಹೃದಯ. ಹಾಗಾಗಿ, ಗಿಲ್ಲಿ ಪಾಪ್ಯುಲಾರಿಟಿ ಕಡಿಮೆಯಾಗೋ ಚಾನ್ಸಸ್‌ ಕಡಿಮೆಯೇ.

Related Articles

LEAVE A REPLY

Please enter your comment!
Please enter your name here

Latest Articles