ನ್ಯೂಸ್ ನಾಟೌಟ್: ಲಯನ್ಸ್ ಕ್ಲಬ್ ಸಂಪಾಜೆ ಲಯನ್ಸ್ ಸೇವ ಭವನ ನಿರ್ಮಾಣದ ಸಹಾಯಾರ್ಥ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಪ್ಪ ಅರೆಭಾಷೆ ನಾಟಕ ಫೆ.28ರಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ. ಸಂಪಾಜೆ ಜೂನಿಯರ್ ಕಾಲೇಜು ನಿಸರ್ಗ ರಂಗಮಂದಿರದಲ್ಲಿ ಈ ನಾಟಕ ನಡೆಯಲಿದೆ. ಲೋಕೇಶ್ ಊರುಬೈಲು ರಚನೆ ಮತ್ತು ನಿರ್ದೇಶನ ಮಾಡಲಿದ್ದಾರೆ. ಅಪ್ಪ ಮಕ್ಕಳ ಬದುಕಿನಲ್ಲಿ ಯಾವ ರೀತಿಯಾಗಿ ದಾರಿ ದೀಪವಾಗಿ ಇರುತ್ತಾರೆ. ಅಪ್ಪನ ಮೌಲ್ಯಗಳು ಮಕ್ಕಳ ಬಾಳಲ್ಲಿ ತರಬಹುದಾದ ಬದಲಾವಣೆಯ ಕುರಿತ ವಿಚಾರಧಾರೆಯನ್ನು ಈ ನಾಟಕದಲ್ಲಿ ಪ್ರಸ್ತುತಪಡಿಸಲಾಗುತ್ತದೆ.













