ನ್ಯೂಸ್ ನಾಟೌಟ್ : ಮಂಗಳೂರು ನಗರದ ನಂತೂರು ವೃತ್ತದ ಬಳಿ ಬುಧವಾರ ರಾತ್ರಿ (ಫೆಬ್ರವರಿ 4, 2026) ಭಯಾನಕ ರಸ್ತೆ ಅಪಘಾತ ನಡೆದಿದ್ದು, ಸ್ಕೂಟರ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರೆಯಾಗಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತ ಯುವತಿಯನ್ನು ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದ್ದು, ಕದ್ರಿ ಶಿವಭಾಗ್ ಕಡೆಯಿಂದ ವಾಮಂಜೂರು ದಿಕ್ಕಿಗೆ ಸ್ಕೂಟರ್ನಲ್ಲಿ ದೀಪ್ತಿ ಮತ್ತು ಕಿಶೋರ್ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕದ್ರಿ ಶಿವಭಾಗ್ ಕಡೆಯಿಂದ ನಂತೂರು ದಿಕ್ಕಿಗೆ ಸಾಗುತ್ತಿದ್ದ ಖಾಸಗಿ ಬಸ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸ್ಕೂಟರ್ ಉರುಳಿ ನೆಲಕ್ಕೆ ಬಿದ್ದಿದ್ದು, ದೀಪ್ತಿಯ ಹೊಟ್ಟೆಯ ಮೇಲೆಯೇ ಬಸ್ ಹರಿದು ಹೋಗಿದೆ. ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಯುವತಿಯನ್ನು ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದ್ದು, ಕದ್ರಿ ಶಿವಭಾಗ್ ಕಡೆಯಿಂದ ವಾಮಂಜೂರು ದಿಕ್ಕಿಗೆ ಸ್ಕೂಟರ್ನಲ್ಲಿ ದೀಪ್ತಿ ತಾನು ಮದುವೆಯಾಗುವ ಹುಡುಗ ಕಿಶೋರ್ ಜೊತೆ ಪ್ರಯಾಣಿಸುತ್ತಿದ್ದರು. ಇತ್ತೀಚೆಗಷ್ಟೇ ಅವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.













