21.6 C
Sullia
Saturday, March 7, 2026

ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ನ್ಯೂಸ್ ನಾಟೌಟ್ : ಇಲ್ಲೊಬ್ಬ ಪುಟ್ಟ ಹುಡುಗನು ಕೂಡ ಪುಣ್ಯಕೋಟಿ (Punyakoti) ಗೋವಿನ ಹಾಡು ಕೇಳಿ, ಅದು ಮಾಡಿದ ತ್ಯಾಗವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಪುಟಾಣಿಯ ಮುಗ್ಧತೆಗೆ ,ಮನಸೋತಿದ್ದಾರೆ


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಕೋಸ್ಟಲ್ ಬೀಟ್ಸ್ (Costal beats) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮನೆಯವರೆಲ್ಲರೂ  ಟಿವಿಯ ಮುಂದೆ ಕುಳಿತು ಪುಣ್ಯಕೋಟಿ ಗೋವಿನ ಹಾಡನ್ನು ವೀಕ್ಷಿಸುತ್ತಿದ್ದಾರೆ. ಈ ನಡುವೆ ಈ ಪುಟ್ಟ ಬಾಲಕನು ಈ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು.

https://www.facebook.com/share/r/1JHAiC17Cj

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮುಗ್ಧತೆ ಎಲ್ಲಾ ಕಾಲದಲ್ಲೂ ಸುಂದರ ಎಂದಿದ್ದಾರೆ. ಇನ್ನೊಬ್ಬರು, ಇವಾಗ್ಲೂ ಈ ಪುಣ್ಯಕೋಟಿ ಹಾಡು ಕೇಳುವಾಗ ದುಃಖ ಆಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುಣ್ಯಕೋಟಿ ಹಾಡಿನಲ್ಲಿ ಅಡಗಿರುವ ಭಾವನೆ ಇದು, ದೇವರು ಆ ಮಗುವಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles