21.6 C
Sullia
Sunday, March 8, 2026

ತಮ್ಮನನ್ನು ಉಳಿಸಲು ಹೋಗಿ ಅಣ್ಣ ಬಲಿಯಾದ -ಕಮಲಾಕರ್ ಭಟ್ ಕೇಸ್​ನಲ್ಲಿ ಕಣ್ಣೀರು ಹಾಕಿದ ಸಂತ್ರಸ್ತ..!ಏನಿದು ಘಟನೆ?

ನ್ಯೂಸ್ ನಾಟೌಟ್ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇತ್ತೀಚೆಗೆ ನಡೆದ ಭೀಕರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಮಹೇಶ್ ಈಗ ಆಸ್ಪತ್ರೆಯಿಂದಲೇ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ನನ್ನನ್ನು ಕಾಪಾಡಲು ಹೋಗಿ ನನ್ನ ಅಣ್ಣ ಬಲಿಯಾದ’ ಎಂದು ಮಹೇಶ್ ಕಣ್ಣೀರು ಹಾಕಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಘಟನೆಯ ಹಿನ್ನೆಲೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಮಹೇಶ್ ಅವರು ತನ್ನ ಪತ್ನಿ ಸುಚಿತ್ರಾ ಮತ್ತು ಆಕೆಯ ಜೊತೆಗಿರುವವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮಹೇಶ್ ಅವರ ಪತ್ನಿ ಸುಚಿತ್ರಾ, ಕಳೆದ ಐದು ತಿಂಗಳ ಹಿಂದೆ ಮಕ್ಕಳನ್ನು ಕರೆದುಕೊಂಡು ಮಹೇಶ್ ಅವರನ್ನು ಬಿಟ್ಟು ಶಿವಮೊಗ್ಗಕ್ಕೆ ತೆರಳಿದ್ದರು ಎನ್ನಲಾಗಿದೆ.

ಶಿವಮೊಗ್ಗಕ್ಕೆ ಹೋದ ಸುಚಿತ್ರಾ ಅಲ್ಲಿ ಜ್ಯೋತಿಷಿ ಕಮಲಾಕರ್ ಭಟ್​ ಜೊತೆ ಸಂಪರ್ಕದಲ್ಲಿದ್ದಳು. ಆ ಸ್ವಾಮೀಜಿಯ ಜೊತೆಯಲ್ಲೇ ಹೋಗಿದ್ದಳು. ಸಿದ್ದಾಪುರ ಭಾಗದಲ್ಲಿ ಆ ಗುರೂಜಿಗೆ ಒಳ್ಳೆಯ ಹೆಸರಿಲ್ಲ, ಎಲ್ಲರಿಗೂ ಆತನ ಬಗ್ಗೆ ಕೆಟ್ಟ ಅಭಿಪ್ರಾಯವಿದೆ. ಇವರೇ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ದಾಳಿಯ ಸಮಯದಲ್ಲಿ ಹಂತಕರು ಮಹೇಶ್ ಅವರನ್ನು ಗುರಿಯಾಗಿಸಿಕೊಂಡಿದ್ದರು. ತಮ್ಮ ತಮ್ಮನನ್ನು ಉಳಿಸಿಕೊಳ್ಳಲು ಮಧ್ಯಪ್ರವೇಶಿಸಿದ ಮಹೇಶ್ ಅವರ ಅಣ್ಣ, ಚಾಕು ಇರಿತಕ್ಕೆ ಒಳಗಾಗಿ ದಾರುಣವಾಗಿ ಮೃತಪಟ್ಟಿದ್ದಾರೆ. ನನ್ನ ತಪ್ಪಿಸಲು ಬಂದು ನನ್ನ ಅಣ್ಣ ಪ್ರಾಣ ಕಳೆದುಕೊಂಡ ಎಂದು ಕಣ್ಣೀರು ಹಾಕಿದ್ದಾರೆ.

ಜೀವಾವಧಿ ಶಿಕ್ಷೆಗೆ ಒತ್ತಾಯ
ತನ್ನ ಅಣ್ಣನ ಸಾವಿಗೆ ಕಾರಣರಾದವರಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು ಎಂದು ಮಹೇಶ್ ಆಗ್ರಹಿಸಿದ್ದಾರೆ. ‘ನನ್ನ ಅಣ್ಣನ ಸಾವಿಗೆ ನ್ಯಾಯ ಸಿಗಬೇಕು. ಈ ಕೃತ್ಯದಲ್ಲಿ ಭಾಗಿಯಾಗಿರುವ ಸುಚಿತ್ರಾ ಮತ್ತು ಆಕೆಗೆ ಸಾಥ್ ನೀಡಿದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles