ನ್ಯೂಸ್ ನಾಟೌಟ್: ಕಲ್ಲುಗುಂಡಿಯ ಮಹಿಳೆಗೆ ಮಾವ ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿದೆ. ಸಾಹಿತ್ಯ ರೈ (27 ವರ್ಷ) ಎಂಬುವವರ ಮೇಲೆ ಹಲ್ಲೆ ನಡೆದಿದೆ. ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಫೆ.2ರಂದು ನಡೆದಿದೆ. ಅಂದು ರಾತ್ರಿ 7.30 ಗಂಟೆಗೆ ಸಾಹಿತ್ಯ ರೈ ಮನೆಯ ಕೋಣೆಯಲ್ಲಿದ್ದಾಗ ಮಾವ ಅಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ್ದಾರೆ, ಬಳಿಕ ಜೀವ ಬೆದರಿಕೆ ಹಾಕಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೊರಗೆ ಬಂದಾಗ ಗಂಡನು ಸಹ ತಂದೆಯ ಪರವಾಗಿ ವರ್ತಿಸಿದ್ದಾನೆ. ಚಿಕಿತ್ಸೆ ಕೊಡಿಸಲು ನಿರಾಕರಿಸಿದ್ದಾನೆ. ಸಾಹಿತ್ಯ ರೈ ಅವರ ತಂದೆ–ತಾಯಿ ಬಂದು ಸಂಪಾಜೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ZERO FIR NO 01/2026 ಕಲಂ:85, 74, 115(2), 117(2), 351(2) ಜೊತೆಗೆ 3(5)BNS ನಂತೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಆಧಾರದಲ್ಲಿ ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆ ನಡೆಸಲಾಗುತ್ತಿದೆ.













