ನ್ಯೂಸ್ ನಾಟೌಟ್ : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವಾಗಿದೆ. ಏರ್ಪೋರ್ಟ್ನ ರನ್ವೇಯಲ್ಲಿ ಬೀದಿನಾಯಿಗಳು ಓಡಾಡಿದ ಘಟನೆಯೊಂದು ವರದಿಯಾಗಿದೆ.
ಎರಡು ಬೀದಿ ನಾಯಿಗಳು ಟರ್ಮಿನಲ್ 2ರ ಹೊಸ ರನ್ವೇಯಲ್ಲಿ ಓಡಾಡಿವೆ. ಅಷ್ಟೇ ಅಲ್ಲದೇ ವಿಮಾನಗಳ ಬಳಿಯೂ ಹೋಗಿ ಸುತ್ತಾಡಿವೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ರನ್ ವೇಯಲ್ಲಿ ವಿಮಾನಗಳಿರದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಬೀದಿ ನಾಯಿಗಳನ್ನು ಕಂಡ ಕೂಡಲೇ ಅಲರ್ಟ್ ಆದ ವಿಮಾನ ನಿಲ್ದಾಣದ ಸಿಬ್ಬಂದಿ ಹರಸಾಹಸ ಪಟ್ಟು ಸೆರೆ ಹಿಡಿದಿದ್ದಾರೆ.













