27.7 C
Sullia
Sunday, March 8, 2026

ಬಜೆಟ್ ದಿನವೇ ಚಿನ್ನ, ಬೆಳ್ಳಿ ದರ ಕುಸಿತ

ನ್ಯೂಸ್ ನಾಟೌಟ್ : ಸತತ ಮೂರನೇ ದಿನವೂ ಚಿನ್ನ (Gold) ಮತ್ತು ಬೆಳ್ಳಿ (Silver) ದರದಲ್ಲಿ ಭಾರಿ ಇಳಿಕೆ ಕಂಡಿದೆ. 2026 ರ ಬಜೆಟ್ ದಿನದಂದೇ MCXನಲ್ಲಿ ಆರಂಭಿಕ ವಹಿವಾಟಿನಲ್ಲಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸುಮಾರು 9% ರಷ್ಟು ಕುಸಿದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,38,600 ರೂ.ಗೆ ಕುಸಿದರೆ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,27,050 ರೂ.ಗೆ ಲಭ್ಯವಿದೆ. ಈ ದರಗಳು ಜಿಎಸ್ಟಿ ಮತ್ತು ಮೇಕಿಂಗ್ ಶುಲ್ಕಗಳನ್ನು ಒಳಗೊಂಡಿಲ್ಲ. ಸ್ಪಾಟ್ ಮಾರುಕಟ್ಟೆಯಲ್ಲಿ ಬೆಳ್ಳಿ ಕೂಡ ಪ್ರತಿ ಕೆಜಿಗೆ ಸುಮಾರು 2,65,600 ರೂ.ಗೆ ಇಳಿದಿದೆ.

ಕಳೆದ ವಾರ ಬೆಳ್ಳಿ ಬೆಲೆ ದಾಖಲೆಯ ಗರಿಷ್ಠ 4 ಲಕ್ಷ ರೂ.ಗೆ ತಲುಪಿತ್ತು. ಭಾರತದಲ್ಲಿ ಬೆಳ್ಳಿ ಬೆಲೆ ಶುಕ್ರವಾರ ಶೇ.27 ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 2,90,000 ರೂ.ಗೆ ತಲುಪಿದೆ. ಇದು 1980 ರ ನಂತರದ ಅತಿದೊಡ್ಡ ಏಕದಿನ ಕುಸಿತವಾಗಿದೆ. ಗುರುವಾರ ಸಂಜೆ 3,30,000 ರೂ.ಗೆ ಇಳಿದಿತ್ತು.

ಬೆಂಗಳೂರಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,27,050 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,38,600 ರೂ. ಇದೆ. ಜೈಪುರದಲ್ಲಿ 22 ಕ್ಯಾ. 1,26,950 ರೂ. ಮತ್ತು 24 ಕ್ಯಾ. 1,38,250 ರೂ. ಇದೆ. ಅಹಮದಾಬಾದ್‌ನಲ್ಲಿ 22 ಕ್ಯಾ. 1,26,850 ರೂ. ಮತ್ತು 24 ಕ್ಯಾ. 1,38,200 ರೂ. ಇದೆ. ಪುಣೆಯಲ್ಲಿ 22 ಕ್ಯಾ. 1,27,050 ರೂ. ಮತ್ತು 24 ಕ್ಯಾ. 1,38,600 ರೂ. ಆಗಿದೆ.

Related Articles

LEAVE A REPLY

Please enter your comment!
Please enter your name here

Latest Articles