27.7 C
Sullia
Sunday, March 8, 2026

ನನ್ನ ಆಹಾರ ನನ್ನ ಚಾಯ್ಸ್: ಡಾಲಿ ಧನಂಜಯ್

ನ್ಯೂಸ್ ನಾಟೌಟ್ : ನನ್ನ ಆಹಾರ ನನ್ನ ಚಾಯ್ಸ್, ಬೇರೆ ಬೇರೆ ಆಂಗಲ್ ಕೊಟ್ಟು ಸಮುದಾಯ ಎಳೆದು ತಂದಿದ್ದು ಬಹಳ ಬೇಜಾರಾಯ್ತು ಎಂದು ನಟ ಡಾಲಿ ಧನಂಜಯ್ (Daali Dhananjaya) ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮಾಂಸಾಹಾರ ಸೇವಿಸಿದ್ದ ವಿಚಾರಕ್ಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ, ನಾನು ನಾನ್ ವೆಜ್ ತಿಂತೀನಿ ಅಂದ್ರೆ ಒಕೆ, ಅದರ ಮಧ್ಯೆ ಜಾತಿ ಎಳೆದು ತಂದ್ರೆ ಹೇಗೆ? ಬೇರೆ ಆರ್ಟಿಸ್ಟ್ಗಳ ಹೆಸರು ತಂದಿದ್ದು ಬೇಜಾರ್ ಆಯ್ತು. ನನ್ನ ಆಹಾರ ನನ್ನ ಚಾಯ್ಸ್. ನಾನು ಆಗಾಗ ಪಾರ್ಟಿ ಮಾಡ್ತೀನಿ, ಸ್ಮೋಕ್ ಮಾಡ್ತಿದ್ದೆ. ಈಗ ನಿಲ್ಲಿಸಿದ್ದೀನಿ. ನನಗೆ ಸೀ-ಫುಡ್ ಬಹಳ ಇಷ್ಟ. ಅದು ನನ್ನ ಇಷ್ಟ, ಬೇರೆ ಬೇರೆ ಆಂಗಲ್ ಕೊಟ್ಟಿದ್ದು, ಸಮುದಾಯವನ್ನ ಎಳೆದು ತಂದಿದ್ದು ಬಹಳ ಬೇಜಾರಾಯ್ತು ಎಂದು ಹೇಳಿದ್ದಾರೆ.

ನಾನು ನನ್ನ ಆಹಾರ, ಆಹಾರ ಪದ್ಧತಿ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ. ನಾನು ಬಹಳ ಇನೋಸೆಂಟ್ ಆಗಿ ನನ್ನ ಗೆಳೆಯನ ಹೋಟೆಲ್‌ಗೆ ಹೋಗಿದ್ದೆ. ಜೊತೆಗೆ ಪ್ರೀತಿಯಿಂದ ತಿಂದು ಬಂದೆ. 10 ರಿಂದ 15 ಬಿರಿಯಾನಿ ಶಾಪ್ ಓಪನ್ ಮಾಡಿದ್ದೀನಿ. ಈ ಥರದ ವಿಷಯ ಪಿಕ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಡಿಸ್ಕಷನ್ ಆಗಿದ್ದು ನೋಡಿ ಶಾಕ್ ಆಯ್ತು ಎಂದಿದ್ದಾರೆ.

ಬಡವರ ಮಕ್ಕಳು ಬೆಳೆಯಬೇಕು ಅನ್ನೋದನ್ನ ಅವರವರ ಅರ್ಥಕ್ಕೆ ಬದಲಾಯಿಸಿ ಮಾತನಾಡಿದ್ದಾರೆ. ಸಂಬಂಧಗಳನ್ನ ಸೆಲೆಬ್ರೇಶನ್ ಮಾಡೋಣ ಅನ್ನೋದನ್ನ ನಾನು ಎಲ್ಲಾ ಕಡೆ ಹೇಳಿದ್ದೀನಿ ಅಷ್ಟೆ. ಎಲ್ಲರೂ ಎಲ್ಲಾ ವಿಚಾರವನ್ನ ಮಾತನಾಡಬಹುದು, ಸಿನಿಮಾ ನಟರು ಅಂದ್ರೆ ಅದನ್ನೇ ಮಾತಾಡಬೇಕು ಅಂತ ಏನಿಲ್ಲ. ನಾನು ಊಟ ಮಾಡಿದ ವಿಚಾರವನ್ನ ಕೂಡ ಮಾತಾಡ್ತಾರೆ ಅಂದ್ರೆ ತಪ್ಪಲ್ವಾ? ಎಂದು ಕಿಡಿಕಾರಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles