ನ್ಯೂಸ್ ನಾಟೌಟ್ : ಬಿಗ್ ಬಾಸ್ ಸೀಸನ್ 12 ರ ಸ್ಪರ್ಧಿ ಸೂರಜ್ ಸಿಂಗ್ ಕಲರ್ಸ್ ಕನ್ನಡ ವಾಹಿನಿಯ ಪವಿತ್ರ ಬಂಧನ ಧಾರಾವಾಹಿ ಯಲ್ಲಿ ನಟಿಸಿದ್ದು,ಇದು ಪ್ರಸಾರ ಆರಂಭಿಸಿ ಮೂರೇ ದಿನಕ್ಕೆ ಭಾರಿ ಸದ್ದು ಮಾಡುತ್ತಿದೆ. ಯಾಕಂದ್ರೆ ಧಾರಾವಾಹಿಯ ಕಥೆ ಅಷ್ಟೊಂದು ಚೆನ್ನಾಗಿದೆ. ಜೊತೆಗೆ ಪ್ರತಿಯೊಬ್ಬ ನಟರು ಕೂಡ ಅವರ ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದಾರೆ.
ಧಾರಾವಾಹಿಯ ಪ್ರೊಮೋದಲ್ಲಿ ತೋರಿಸಿದಂತೆ ಕಥೆ ವಿಭಿನ್ನವಾಗಿದೆ. ಅಣ್ಣ ದೇವದತ್ ದೇಶ್ಮುಖ್ ಅಂದ್ರೆ ತಮ್ಮ ತಿಲಕ್ ದೇಶ್ಮುಖ್ ಗೆ ಪ್ರಾಣ, ನಾನು ಪ್ರೀತಿಸುವ ಹುಡುಗಿಯನ್ನು ಅಣ್ಣನ ಆಶೀರ್ವಾದ ಪಡೆದು ಮದುವೆಯಾಗಬೇಕು ಎನ್ನುವ ಆಸೆ ತಿಲಕ್ ನದು, ಆದರೆ ವಿಧಿಯಾಟವೇ ಬೇರೆಯಾಗಿರುತ್ತದೆ. ಕೊನೆಗೆ ತಮ್ಮ ಪ್ರೀತಿಸುವ ಹುಡುಗಿ ಪವಿತ್ರವನ್ನು ಅಣ್ಣ ದೇವದತ್ ಮದುವೆಯಾಗುತ್ತಾನೆ
ಆದರೆ ಈ ರೀತಿ ಟ್ವಿಸ್ಟ್ ಕೊಟ್ಟಿದ್ದು ಯಾಕೆ ಅನ್ನೋದೆ ಗೊತ್ತಿಲ್ಲ. ಅಣ್ಣ -ತಮ್ಮನಿಗೆ ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗೆ ಜೀವ. ತಮ್ಮ ಏನೇ ಮಾಡಿದರೂ ಅದನ್ನು ನಡೆಸಿಕೊಡುವ ಅಣ್ಣ, ತನ್ನ ತಮ್ಮ ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನೇ ಯಾಕೆ ಮದುವೆಯಾದ ಅನ್ನೋದು ಮಾತ್ರ ಸೀರಿಯಲ್ ನೋಡಿದರೇನೆ ಗೊತ್ತಾಗಬಹುದು.
ಈಗಾಗಲೇ ಪ್ರಸಾರವಾಗಿರುವ ಧಾರಾವಾಹಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ದೇವದತ್, ತಿಲಕ್ ಮತ್ತು ಪವಿತ್ರ ಮೂವರ ಕ್ಯಾರೆಕ್ಟರ್ ಅದ್ಭುತವಾಗಿದ್ದು, ಅಣ್ಣ -ತಮ್ಮನ ಭಾಂದವ್ಯ ಹಾಗೂ ಪವಿತ್ರ ಮತ್ತು ತಿಲಕ್ ಪ್ರೀತಿ ಇವೆರಡೂ ನೋಡೋದಕ್ಕೆ ತುಂಬಾನೆ ಸುಂದರವಾಗಿದೆ, ಈ ಸೀರಿಯಲ್ ಸೂಪರ್ ಹಿಟ್ ಆಗೋದು ಖಚಿತಾ ಎಂದಿದ್ದಾರೆ.













