27.7 C
Sullia
Sunday, March 8, 2026

ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಯಾರೆ ನೀ ಮೋಹಿನಿ’ ನಟಿ , ಇಂದಿನಿಂದ “ನಾನು” ಅಲ್ಲ… “ನಾವು” ಪೋಸ್ಟ್ ಹಂಚಿಕೊಂಡ ಸುಷ್ಮಾ

ನ್ಯೂಸ್ ನಾಟೌಟ್ :ಕನ್ನಡ ಕಿರುತೆರೆಯಲ್ಲಿ ಬಾಲನಟಿಯಾಗಿ, ನಾಯಕಿಯಾಗಿ, ವಿಲನ್ ಆಗಿ ಮಿಂಚಿದ ನಟಿ ಸುಷ್ಮಾ ಶೇಖರ್ ತಮ್ಮ ಬಹು ಕಾಲದ ಗೆಳೆಯನ ಜೊತೆ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು. ಸರಳ ಸಮಾರಂಭದಲ್ಲಿ ನಡೆದ ವಿವಾಹದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಸುಷ್ಮಾ ತಮ್ಮ ನಿಶ್ಚಿತಾರ್ಥದ ಬಗ್ಗೆ ಕೂಡ ಹೆಚ್ಚಾಗಿ ಸುದ್ದಿ ಮಾಡಿರಲಿಲ್ಲ. ಇದೀಗ ಮದುವೆಯನ್ನೂ ಸಹ ಸದ್ದಿಲ್ಲದೇ ಸರಳ ಸಮಾರಂಭದಲ್ಲಿ ಜನವರಿ 25ರಂದು ನಡೆದಿದ್ದು, ಇದೀಗ ಸುಂದರ ಕ್ಷಣಗಳ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂದಿನಿಂದ “ನಾನು” ಅಲ್ಲ… “ನಾವು”

ಮದುವೆಯ ಫೋಟೊಗಳ ಜೊತೆಗೆ ಸುಷ್ಮಾ, ಇದು ಕೇವಲ ಮದುವೆಯಲ್ಲ, ಪ್ರೀತಿ, ಗೌರವ ಮತ್ತು ಒಗ್ಗಟ್ಟಿನಿಂದ ತುಂಬಿದ ಜೀವನದ ಆರಂಭ. ಎರಡು ಕುಟುಂಬಗಳ ಪವಿತ್ರ ಸಂಗಮ, ಎರಡು ಆತ್ಮಗಳ ಶಾಶ್ವತ ಸಂಬಂಧ. ಇಂದಿನಿಂದ “ನಾನು” ಅಲ್ಲ… “ನಾವು” ಎಂದು ಬರೆದುಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles