27.7 C
Sullia
Sunday, March 8, 2026

ʼಬಿಗ್‍ಬಾಸ್ʼ ವಿನ್ನರ್ ಗಿಲ್ಲಿ ಅಲ್ಲ, ನಿರ್ಮಲಾ ಸೀತಾರಾಮನ್! ಶಾಸಕ ಪ್ರದೀಪ್ ಈಶ್ವರ್ ಹೀಗೆ ಹೇಳಿದ್ಯಾಕೆ?


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್ : ರಾಜ್ಯದ ಜನರಿಗೆ ಒಂದು ವಿಷಯ ತಿಳಿಸಲು ಇಚ್ಛಿಸುತ್ತೇವೆ. ಎಲ್ಲರೂ ತಿಳಿದುಕೊಂಡಿದ್ದಾರೆ ಈ ಸಾಲಿನ ಬಿಗ್‍ಬಾಸ್ ರಿಯಾಲಿಟಿ ಶೋ ವಿನ್ನರ್ ಗಿಲ್ಲಿ ಅಂತ, ಆದರೆ, ನಾನು ಹೇಳುತ್ತೇನೆ, ವಿನ್ನರ್ ಗಿಲ್ಲಿ ಅಲ್ಲ, ನಿಜವಾದ ವಿನ್ನರ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಡಂ ಎಂದು ಕಾಂಗ್ರೆಸ್ ಸದಸ್ಯ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು.

ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಸೂಚಿಸಿದ ‘ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವ’ವನ್ನು ಅನುಮೋದಿಸಿ ಅವರು ಮಾತನಾಡಿದರು.

ಬಿಗ್ ಬಾಸ್ ಗೆದ್ದವರಿಗೆ ನೀಡಿದ ಬಹುಮಾನ 50ಲಕ್ಷ ರೂ.ಗಳಲ್ಲಿ ಶೇ.18ರಷ್ಟು ಜಿಎಸ್‍ಟಿ, ಶೇ.30ರಷ್ಟು ಆದಾಯ ತೆರಿಗೆ ಹಾಗೂ ಶೇ.4ರಷ್ಟು ಸೆಸ್ ಸೇರಿ ಒಟ್ಟು ಶೇ.52ರಷ್ಟು ಪಾಲು ಪಡೆದಿದ್ದು ನಿರ್ಮಲಾ ಸೀತಾರಾಮನ್. ಪಾಪ ಮಂಡ್ಯ ಹುಡುಗ(ಗಿಲ್ಲಿ)ನಿಗೆ ಹೋಗೋದು ಕೇವಲ ಶೇ.48ರಷ್ಟು ಮಾತ್ರ. ಕೇಂದ್ರ ಸರಕಾರದ ತೆರಿಗೆ ವಿಧಾನದಿಂದ ಜನಸಾಮಾನ್ಯರಿಗೆ ಯಾವ ರೀತಿ ತೊಂದರೆ ಆಗಿದೆ ಎಂದು ಹೇಳಿದರು.





Related Articles

LEAVE A REPLY

Please enter your comment!
Please enter your name here

Latest Articles