ನ್ಯೂಸ್ ನಾಟೌಟ್: ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿ ಗಣರಾಜ್ಯೋತ್ಸವ ಆಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೆಸಿ ಲತಾಶ್ರೀ ಸುಪ್ರೀತ್ ಮೊಂಟಡ್ಕವಹಿಸಿದ್ದರು.
ಜೇಸಿ ಹೆಚ್.ಜಿ.ಎಫ್. ನವೀನ್ ಕುಮಾರ್, ಪೂರ್ವಾಧ್ಯಕ್ಷರು, ಜೇಸಿಐ ಸುಳ್ಯ ಪಯಸ್ವಿನಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಜೇಸಿಐ ಸುಳ್ಯ ಪಯಸ್ವಿನಿಯ ನಿಕಟ ಪೂರ್ವ ಅಧ್ಯಕ್ಷಜೇಸಿ ಹೆಚ್.ಜಿ.ಎಫ್. ಸುರೇಶ್ ಕಾಮತ್, ಪೂರ್ವಾಧ್ಯಕ್ಷ ಜೇಸಿ ಹೆಚ್.ಜಿ.ಎಪ್ ಮೋಹನ್ ಎ. ಕೆ., ಜೇಸಿ ಹೆಚ್.ಜಿ.ಎಫ್ ಗುರುಪ್ರಸಾದ್ ನಾಯಕ್, ವಿದ್ಯಾರ್ಥಿನಿ ನಿಲಯದ ಶಿಬ್ಬಂದಿ ವರ್ಗದ ವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ಜೇಸಿ. ತಾರಾ ಮಾದವ ಚೂಂತಾರು ವಂದಿಸಿದರು.













